ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಲೆ ಏರಿಕೆಯಲ್ಲಿ ಟೊಮ್ಯಾಟೊ ಆಯ್ತು, ಇದೀಗ ಈರುಳ್ಳಿ ಸರದಿ. ಟೊಮ್ಯಾಟೊ ಬಾತ್, ಟೊಮ್ಯಾಟೊ ಗೊಜ್ಜು ಮರೆತಿದ್ದ ಜನ ಟೊಮ್ಯಾಟೊ ರೇಟ್ ಕಡಿಮೆಯಾಗಿ ಖುಷಿ ಪಟ್ಟಿದ್ದರು. ಆದರೆ ಇದೀಗ ಈರುಳ್ಳಿ ದುಬಾರಿಯಾಗ್ತಿರೋ ಕಾರಣ ಬಹುತೇಕ ಎಲ್ಲ ಅಡುಗೆ ಮರೆಯೋ ಸಮಯ ಬಂತಾ?
ಹೌದು, ಈಗ ಮಾರ್ಕೆಟ್‌ನಲ್ಲಿ ಈರುಳ್ಳಿ ಬೆಲೆ ಕೆಜಿಗೆ 70 ರೂಪಾಯಿ, ಇನ್ನೇನು ವಾರದಲ್ಲಿ ಈರುಳ್ಳಿ ಬೆಲೆ 100 ರೂಪಾಯಿ ದಾಟಲಿದೆ. ಈರುಳ್ಳಿ ಬೆಳೆದ ರೈತನ ಮುಖದಲ್ಲಿ ಮಂದಹಾಸ ಮೂಡಿದ್ರೆ, ಕೊಳ್ಳುವ ಮಿಡಲ್ ಕ್ಲಾಸ್ ಜನರಲ್ಲಿ ಕಣ್ಣೀರಿದೆ.
ಕಳೆದ ವಾರವಷ್ಟೇ 50 ರೂಪಾಯಿ ಇದ್ದ ಬೆಲೆ ಈಗ 70 ರೂಪಾಯಿ ಆಗಿದೆ, ಈಗಲೇ ಈರುಳ್ಳಿ ತಂದಿಟ್ಟುಕೊಳ್ಳಿ, ಮುಂದೆ ಇನ್ನಷ್ಟು ದುಬಾರಿಯಾಗೋದು ಗ್ಯಾರೆಂಟಿ!
ಉತ್ತರ ಕರ್ನಾಟಕ ಭಾಗದಲ್ಲಿ ತೀವ್ರ ಬರ ಪರಿಸ್ಥಿತಿ ಇರುವ ಕಾರಣ ಈರುಳ್ಳಿ ಬೆಲೆ ಹೆಚ್ಚಾಗಿದೆ. ಇನ್ನೂ ಎರಡು ತಿಂಗಳು ಬೆಲೆ ಇಳಿಕೆ ಸಂಭವ ಕಡಿಮೆ ಎನ್ನಲಾಗಿದೆ.