Monday, December 11, 2023

Latest Posts

ಅಮೆಜಾನ್ ದಟ್ಟಾರಣ್ಯದಲ್ಲಿ ವಿಮಾನ ಪತನ: 12 ಮಂದಿ ಸಾವು

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಬ್ರೆಜಿಲ್‌ನ ಅಮೆಜಾನ್ ದಟ್ಟಾರಣ್ಯದಲ್ಲಿ ಸಣ್ಣ ವಿಮಾನ ಪತನಗೊಂಡಿದೆ. ವಿಮಾನದಲ್ಲಿದ್ದ ಮಗು, ಇಬ್ಬರು ಪೈಲಟ್‌ ಸೇರಿ ಒಟ್ಟು 12 ಮಂದಿ ಮೃತಪಟ್ಟಿರುವ ಘಟನೆ ಭಾನುವಾರ ನಡೆದಿದೆ.

ಸಿಂಗಲ್​ – ಎಂಜಿನ್ ಸೆಸ್ನಾ ಕಾರವಾನ್ ವಿಮಾನವು ಟೇಕ್ ಆಫ್ ಆದ ಸ್ವಲ್ಪ ಸಮಯದ ಬಳಿಕ ರಿಯೊ ಬ್ರಾಂಕೊದ ವಿಮಾನ ನಿಲ್ದಾಣದ ಬಳಿ ಪತನಗೊಂಡಿದೆ ಎಂದು ವಾಯುವ್ಯ ರಾಜ್ಯ ಎಕರೆ ಸರ್ಕಾರ ಹೇಳಿದೆ.

ಘಟನೆಯಲ್ಲಿ ಮಗು, ಇಬ್ಬರು ಪೈಲಟ್‌ ಸೇರಿ 9 ಮಂದಿ ಪ್ರಯಾಣಿಕರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.

ಸ್ಥಳೀಯ ಪತ್ರಿಕಾ ವರದಿಗಳ ಪ್ರಕಾರ, ಪೆರು ಮತ್ತು ಬೊಲಿವಿಯಾದೊಂದಿಗಿನ ಬ್ರೆಜಿಲ್‌ ಗಡಿಯ ಸಮೀಪವಿರುವ ಪ್ರದೇಶದಲ್ಲಿ ವಿಮಾನವು ಬೆಂಕಿಗೆ ಆಹುತಿಯಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!