ಯುನಿಸ್ ಚಂಡಮಾರುತಕ್ಕೆ ಬ್ರಿಟನ್ ತತ್ತರ: ಎರಡು ಲಕ್ಷಕ್ಕೂ ಹೆಚ್ಚು ಮನೆಗಳಲ್ಲಿ ಕರೆಂಟ್ ಇಲ್ಲ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಅಟ್ಲಾಂಟಿಕ್‌ನಲ್ಲಿ ಯುನಿಸ್ ಚಂಡಮಾರುತದಿಂದ ವಿದ್ಯುತ್ ವ್ಯತ್ಯವಾಗಿದ್ದು, ಬ್ರಿಟನ್‌ನ ಎರಡು ಲಕ್ಷಕ್ಕೂ ಹೆಚ್ಚು ಮನೆಗಳಲ್ಲಿ ವಿದ್ಯುತ್ ಸರಬರಾಜು ಇಲ್ಲದಂತಾಗಿದೆ.

ಭೀಕರ ಯುನಿಸ್ ಚಂಡಮಾರುತದ ಪ್ರಭಾವಕ್ಕೆ ಜನ ತತ್ತರಿಸಿದ್ದು, ಕತ್ತಲೆಯಲ್ಲಿ ದಿನ ಕಳೆಯುತ್ತಿದ್ದಾರೆ.ಬ್ರಿಟನ್, ಐರ್ಲೆಂಡ್, ಬೆಲ್ಜಿಯಂ, ಜರ್ಮನಿ, ನೆದರ್‌ಲ್ಯಾಂಡ್ ಮತ್ತು ಪೋಲೆಂಡ್‌ನಲ್ಲಿ ಚಂಡಮಾರುತದಿಂದಾಗಿ ಸಂಭವಿಸಿದ ಅವಘಡಗಳಲ್ಲಿ 14 ಮಂದಿ ಮೃತಪಟ್ಟಿದ್ದಾರೆ. ಈ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಿದ್ದು, ವಿದ್ಯುತ್ ಸರಬರಾಜು ಇಲ್ಲದೆ ತುರ್ತು ಸಿಬ್ಬಂದಿ ವಿದ್ಯುತ್ ಪುನರ್ ಸ್ಥಾಪನೆಗೆ ಹರಸಾಹಸ ಪಡುತ್ತಿದ್ದಾರೆ.

ಚಂಡಮಾರುತ ಪ್ರತಿ ಗಂಟೆಗೆ 196 ಕಿ.ಮೀ. ವೇಗದಲ್ಲಿ ಬೀಸುತ್ತಿದ್ದು, ಬ್ರಿಟನ್‌ನಲ್ಲಿ ಮೂವರು ಮೃತಪಟ್ಟಿದ್ದಾರೆ. ವಿದ್ಯುತ್ ವ್ಯತ್ಯಯ ಜೊತೆಗೆ ರೈಲು ಸಂಚಾರವೂ ಸ್ಥಗಿತಗೊಂಡಿದೆ. ಫ್ರಾನ್ಸ್ ಹಾಗೂ ನೆದರ್‌ಲೆಂಡ್‌ನಲ್ಲಿಯೂ ಇದೇ ಪರಿಸ್ಥಿತಿ ಇದ್ದು, ವಿದ್ಯುತ್ ಪೂರೈಕೆ ಕಡಿತವಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!