Monday, September 26, 2022

Latest Posts

ಇಂದು ಬ್ರಿಟನ್ ರಾಣಿ ಎಲಿಜಬೆತ್ ಅಂತ್ಯಕ್ರಿಯೆ: ಹಲವು ಗಣ್ಯರು ಭಾಗಿ

ಹೊಸದಿಗಂತ ಡಿಜಿಟಲ್ ಡೆಸ್ಕ್ :

ಬ್ರಿಟನ್ ಮಹಾರಾಣಿ ಎಲಿಜಬೆತ್ ಅಂತ್ಯಕ್ರಿಯ ಇಂದು ನಡೆಯಲಿದೆ. ನಾಲ್ಕು ಗಂಟೆಗೂ ಹೆಚ್ಚಿನ ಸಮಯ ವಿವಿಧ ಧಾರ್ಮಿಕ ಹಾಗೂ ರಾಜಮನೆತನದ ಶಿಷ್ಟಾಚಾರದ ವಿಧಿವಿಧಾನಗಳು ನೆರವೇರಲಿವೆ.

ಎರಡನೇ ಮಹಾಯುದ್ಧ ಸಮಯದಲ್ಲಿ ಬ್ರಿಟನ್ ಸಾಮ್ರಾಜ್ಯವನ್ನು ಮುನ್ನಡೆಸಿದ್ದ ಪ್ರಧಾನಿ ವಿನ್‌ಸ್ಟಲ್ ಚರ್ಚಿಲ್ ಅವರ ಅಂತ್ಯಸಂಸ್ಕಾರ ನಡೆದಿತ್ತು. ಅದಾದ ನಂತರ ಅಂದರೆ 1965ರ ನಂತರ ಸರ್ಕಾರಿ ಗೌರವಗಳೊಂದಿಗೆ ಗಣ್ಯರ ಅಂತ್ಯಸಂಸ್ಕಾರ ನಡೆಯುತ್ತಿದೆ.

ರಾಣಿ ವಿಕ್ಟೊರಿಯಾ ಅಂತ್ಯಸಂಸ್ಕಾರಕ್ಕೆ ಬಳಸಲಾದ ಬಂದೂಕಿನ ಗಾಡಿಯಲ್ಲಿ ಎಲಿಜಬೆತ್ ಅವರ ಪಾರ್ಥೀವ ಶರೀರವನ್ನು ಅಂತ್ಯಸಂಸ್ಕಾರಕ್ಕೆ ತರಲಾಗುತ್ತದೆ. ವೆಸ್ಟ್ ಮಿನಿಸ್ಟರ್ ಅಬೆಯಲ್ಲಿ ನಡೆಯುವ ಅಂತ್ಯಕ್ರಿಯೆಯನ್ನು ವಿಶ್ವದಾದ್ಯಂತ ಕೋಟಿ ಜನರು ವೀಕ್ಷಿಸಲಿದ್ದಾರೆ.ವಿಶ್ವದಾದ್ಯಂತ ಹಲವು ಗಣ್ಯರು ಅಂತ್ಯಕ್ರಿಯೆಯಲ್ಲಿ ಉಪಸ್ಥಿತರಿರಲಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!