ದಿನಭವಿಷ್ಯ | ವಿವಾಹಿತರಿಗೆ ಶುಭ ಬೆಳವಣಿಗೆ, ಆದರೆ ವಿವಾಹಕಾಂಕ್ಷಿಗಳಿಗೆ ನಿರಾಶೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್
ಮೇಷ
ಪೂರಕವಾದ ದಿನ. ವೃತ್ತಿಯಲ್ಲಿ ಯಶಸ್ಸು. ಬಾಂಧವ್ಯ ವೃದ್ಧಿ. ಕಷ್ಟವೆಂದು ಭಾವಿಸಿದ ಕೆಲಸವೊಂದು ಸುಗಮವಾಗಿ ನಡೆಯಲಿದೆ.

ವೃಷಭ
ವೃತ್ತಿಯಲ್ಲಿ  ಸಂಕಷ್ಟ ಎದುರಾಗುವುದು. ಆರ್ಥಿಕ ಹಿನ್ನಡೆ. ಆದರೆ ಗಂಭೀರ ಸ್ವರೂಪದ್ದಲ್ಲ. ಹಾಗಾಗಿ ಚಿಂತೆ ಬೇಡ. ಎಲ್ಲವೂ ಮುಂದಕ್ಕೆ ಸರಿಹೋಗುವುದು.

ಮಿಥುನ
ಏರುಪೇರಿನ ದಿನ. ವೃತ್ತಿಯಲ್ಲಿ, ಉದ್ದಿಮೆಯಲ್ಲಿ  ಯಶಸ್ಸು. ಆದರೆ ಬಾಂಧವ್ಯಕ್ಕೆ ಸಂಬಂಧಿಸಿ ಮನಸ್ಸಿಗೆ ನೋವು ತರುವ ವಿದ್ಯಮಾನ.

ಕಟಕ
ನಿಮ್ಮ ಸ್ವಂತ ಕೆಲಸಕ್ಕೆ ಗಮನ ಕೊಡಿ. ಬೇರೆಯವರ ಉಸಾಬರಿ ಬೇಡ. ಕೌಟುಂಬಿಕವಾಗಿ ಕಿರಿಕಿರಿ ಉಂಟಾದೀತು. ಆರೋಗ್ಯ ಸಮಸ್ಯೆ.

ಸಿಂಹ
ವಿವಾಹಿತರಿಗೆ ಶುಭ ಬೆಳವಣಿಗೆ. ಆದರೆ ವಿವಾಹಕಾಂಕ್ಷಿಗಳಿಗೆ ನಿರಾಶೆ ಕಾದಿದೆ.  ವಿದ್ಯಾರ್ಥಿಗಳ ಒತ್ತಡ
ಹೆಚ್ಚುವಂತಹ ವಿದ್ಯ ಮಾನ. ಸಹನೆಯಿರಲಿ.

ಕನ್ಯಾ
ಕೌಟುಂಬಿಕ ವ್ಯವಹಾರ ಗಳಲ್ಲಿ ಇಂದು ಹೆಚ್ಚು ತೊಡಗುವಿರಿ. ಖರ್ಚು ಹೆಚ್ಚುವುದು. ಆದರೂ ಅದು ನಿಮಗೆ ಚಿಂತೆ ತರದು. ಮನೆಯವರ ಖುಶಿ ನಿಮಗೆ ಮುಖ್ಯ.

ತುಲಾ
ನಿಮ್ಮ ಕ್ರಿಯಾಶೀಲ ಚಟುವಟಿಕೆಗೆ ಬೆಂಬಲ ದೊರಕುವುದು. ಆಪ್ತೇಷ್ಟರ ಜತೆ ಸಮಯ ಕಳೆಯುವ ಅವಕಾಶ. ಆರ್ಥಿಕವಾಗಿ ತುಸು ಹಿನ್ನಡೆ ಸಂಭವ.

ವೃಶ್ಚಿಕ
ಉದ್ಯೋಗದಲ್ಲಿ ಅತೀವ ಒತ್ತಡ ಅನುಭವಿಸುವಿರಿ. ಆದರೆ ಮನೆ ಸೇರಿದ ಬಳಿಕ ಎಲ್ಲವನ್ನೂ ಮರೆಯುವಿರಿ. ಕುಟುಂಬಸ್ಥರ ಸಂಗದಲ್ಲಿ ಸಂತೋಷ.

ಧನು
ಖರ್ಚು ನಿಮ್ಮ ನಿರೀಕ್ಷೆಗಿಂತಲೂ ಮೀರಿ ಹೆಚ್ಚಬಹುದು. ಅದನ್ನು ನಿಯಂತ್ರಿಸಲು ದಾರಿ ಹುಡುಕುವಿರಿ. ಕುಟುಂಬದಲ್ಲಿ ಸಣ್ಣ ಮಟ್ಟಿನ ಸಂಘರ್ಷ.

ಮಕರ
ಕಠಿಣ ದಿನ. ಆರ್ಥಿಕ ಸಮಸ್ಯೆಗಳನ್ನು ಸರಿಯಾಗಿ ನಿಭಾಯಿಸಿ. ಬಂಧುಗಳ ಜತೆ ಸಂಘರ್ಷಕ್ಕೆ ಇಳಿಯದಿರಿ. ಆರೋಗ್ಯ ಸಮಸ್ಯೆ.

ಕುಂಭ
ವೃತ್ತಿಗೆ ಸಂಬಂಧಿಸಿ ಕೆಲವು ಅನಪೇಕ್ಷಿತ ಬೆಳವಣಿಗೆ ಸಂಭವಿಸ
ಬಹುದು. ಪ್ರಮಾದಗಳು ಆಗದಂತೆ ಎಚ್ಚರ ವಹಿಸಿ. ಆರ್ಥಿಕ ಹಿನ್ನಡೆ ಸಂಭವ.

ಮೀನ
ಬಿಡುವಿಲ್ಲದ ದಿನ. ಇದರಿಂದ ನಿಮ್ಮ ಮನಸ್ಸು ತೀರಾ ಅಸಹನೆಯಿಂದ ಕುದಿಯಬಹುದು. ಎಲ್ಲರ ಜತೆ ರೇಗುವ ಸಾಧ್ಯತೆಯಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!