ಯುದ್ಧಪೀಡಿತ ಉಕ್ರೇನ್‌ ಗೆ ಬ್ರಿಟನ್‌ ಪ್ರಧಾನಿ ಬೋರಿಸ್‌ ಬೇಟಿ; ಅಗತ್ಯ ಶಸ್ತ್ರಾಸ್ತ್ರ ಪೂರೈಕೆ ಭರವಸೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ದಿನಗಳುರುಳಿದರೂ ರಷ್ಯಾ ಮತ್ತು ಉಕ್ರೇನ್‌ ನಡುವಿನ ಯುದ್ಧ ಮಾತ್ರ ನಿಲ್ಲುತ್ತಿಲ್ಲ. ಈಗಾಗಲೇ ಸಾಕಷ್ಟು ಸಾವು-ನೋವು ಸಂಭವಿಸಿವೆ. ಉಕ್ರೇನ್‌ ಅಧ್ಯಕ್ಷ ಜಗತ್ತಿನ ರಾಷ್ಟ್ರಗಳಿಂದ ಅಗತ್ಯ ಶಸ್ತ್ರಾಸ್ತ್ರ ನೆರವನ್ನು ಬಯಸಿದ್ದಾರೆ. ಈ ನಡುವೆ ಬ್ರಿಟನ್‌ ಪ್ರಧಾನಿ ಉಕ್ರೇನ್‌ಗೆ ಭೇಟಿ ನೀಡಿದ್ದಾರೆ. ರಾಜಧಾನಿ ಕೀವ್‌ನಲ್ಲಿ ಬೀದಿ ಬೀದಿಗಳನ್ನು ಸುತ್ತಿ ರಷ್ಯಾ ಸೇನೆ ಸೃಷ್ಟಿ ಮಾಡಿದ ಯುದ್ಧದ ಭೀಕರತೆಯನ್ನು ಪರಿಶೀಲನೆ ನಡೆಸಿದ್ದಾರೆ.
ಈ ಸಂದರ್ಭದಲ್ಲಿ ರಷ್ಯಾ ವಿರುದ್ಧ ಸೆಣಸಾಡಲು ಹೆಚ್ಚಿನ ಶಸ್ತ್ರಾಸ್ತ್ರಗಳನ್ನು ಪೂರೈಕೆ ಮಾಡಲಾಗುವುದು ಎಂದು ಝೆಲೆನ್ಸ್ಕಿಗೆ ಭರವಸೆ ನೀಡಿದರು. ಈ ಭೇಟಿಯೊಂದಿಗೆ ಉಕ್ರೇನ್‌ಗೆ ತಮ್ಮ ದೀರ್ಘಕಾಲದ ಬೆಂಬಲವನ್ನು ಮುಂದುವರಿಸುವುದಾಗಿ ಬೋರಿಸ್ ಜಾನ್ಸನ್ ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!