ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ರಾಜೀನಾಮೆ?

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಬ್ರಿಟನ್‌ ಪ್ರಧಾನಿ ಬೊರಿಸ್‌ ಜಾನ್ಸನ್‌ ಗುರುವಾರ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸುವುದು ಖಚಿತವಾಗಿದೆ.
ಈ ಕುರಿತು ಬ್ರಿಟನ್‌ ಮಾಧ್ಯಮಗಳು ವರದಿ ಮಾಡಿದೆ. ಇದರ ಬೆನ್ನಲ್ಲೇ ಮುಂದಿನ ಪ್ರಧಾನಿ ಯಾರಾಗಬಹುದು ಎನ್ನುವ ಕುತೂಹಲ ಆರಂಭವಾಗಿದೆ.
ಸಾಲು ಸಾಲು ಹಗರಣಗಳಿಂದ ಸ್ವಪಕ್ಷೀಯರೇ ಬೊರಿಸ್‌ ಜಾನ್ಸನ್‌ ವಿರುದ್ಧ ತಿರುಗಿಬಿದಿದ್ದು, ಈಗಾಗಲೇ 40ಕ್ಕೂ ಅಧಿಕ ಸಚಿವರು ರಾಜೀನಾಮೆ ನೀಡಿದ್ದು, ಇದೀಗ ಬೊರಿಸ್‌ ಜಾನ್ಸನ್‌ ಪದಾತ್ಯಾಗ ಮಾಡಲು ನಿರ್ಧರಿಸಿದ್ದಾರೆ.
ರಿಷಿ ಸುನಕ್ ಅವರ ರಾಜೀನಾಮೆಯ ನಂತರ ಬ್ರಿಟನ್ ನೂತನ ಹಣಕಾಸು ಸಚಿವ ನಾಧಿಮ್ ಜಹಾವಿ ಧಾನಿ ಬೋರಿಸ್ ಜಾನ್ಸನ್ ಅವರನ್ನು ‘ಸರಿಯಾದ ಕೆಲಸವನ್ನು ಮಾಡಿ ಈಗಲೇ ಹೋಗಿ’ ಎಂದು ಒತ್ತಾಯಿಸಿದ್ದಾರೆ.ಈ ಹಿನ್ನಲೆಯಲ್ಲಿ ಇಂದು ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ತಮ್ಮ ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡುವ ಸಾಧ್ಯತೆ ಇದೆ ಎಂಬುದಾಗಿ ವರದಿಗಳು ತಿಳಿಸಿವೆ.
‘ಪ್ರಧಾನ ಮಂತ್ರಿಗಳೇ, ನಿಮ್ಮ ಹೃದಯದಲ್ಲಿ ಮಾಡಬೇಕಾದ ಸರಿಯಾದ ಕೆಲಸವೆಂದರೆ ಏನು ಎಂದು ನಿಮಗೆ ತಿಳಿದಿದೆ, ಮತ್ತು ಈಗಲೇ ಹೋಗಿ’ ಎಂದು ಅವರು ಟ್ವೀಟ್ ಮಾಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!