Monday, August 8, 2022

Latest Posts

ಮೂರು ತಿಂಗಳ ಗರ್ಭಿಣಿಯ ಜೀವ ಉಳಿಸಿದ ವೈದ್ಯರು

ಹೊಸದಿಗಂತ ವರದಿ ಕಲಬುರಗಿ: 

ಕಲ್ಯಾಣ ಕರ್ನಾಟಕದ ಜನತೆಯ ಪಾಲಿಗೆ ದೇವರ ಸ್ವರೂಪವೆಂದೆ ಪ್ರಸಿದ್ಧಿಯಾಗಿರುವ ನಗರದ ಹಾಗರಗಾ ರಿಂಗ್ ರಸ್ತೆಯ ಬಳಿಯಿರುವ ಮಣೂರ ಮಲ್ಟೀಸ್ಪೇಶಾಲಿಟಿ ಆಸ್ಪತ್ರೆ ವೈದ್ಯರು ಮತ್ತೆ ಇಬ್ಬರ ಜೀವ ಉಳಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಜೂನ್ 19 ರಂದು ಕುಟುಂಬ ಸಮೇತ ಹೈದ್ರಾಬಾದ್‌ನಿಂದ ಶಹಾಪುರಕ್ಕೆ ಹೋಗುವಾಗ ಗುರುಮಿಠಕಲ್ ಬಳಿ ನಡೆದ ರಸ್ತೆ ಅಪಘಾತದಲ್ಲಿ ಒಬ್ಬ ವ್ಯಕ್ತಿ ಸ್ಥಳದಲ್ಲಿಯೆ ಮೃತಪಟ್ಟಿದ್ದು, ಇನ್ನೂ ಮೂವರಿಗೆ ಗಂಭೀರ ಗಾಯಗಳಾಗಿದ್ದವು, ಅವರಿಗೆ ಮಣೂರ ಆಸ್ಪತ್ರೆಯ ತುರ್ತು ಚಿಕಿತ್ಸಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು.

ಅಪಘಾತದಲ್ಲಿ 21 ವರ್ಷದ 3 ತಿಂಗಳ ಗರ್ಭಿಣಿ ಮಹಿಳೆಯೊಬ್ಬರಿಗೆ ಬಲವಾದ ಪೆಟ್ಟು ಬಿದ್ದು ಪ್ರಾಣಾಪಯ ಸ್ಥಿತಿಯಲ್ಲಿದ್ದರು.  ಮಹಿಳೆಗೆ ಮಣೂರ ಆಸ್ಪತ್ರೆಯ ವೈದ್ಯರ ತಂಡವು ತುರ್ತು ಶಸ್ತ್ರಚಿಕಿತ್ಸೆ ಮಾಡಿ ರೋಗಿ ಮತ್ತು ಮಗುವಿನ (ಭ್ರೂಣ) ಜೀವವನ್ನು ಉಳಿಸಿದ್ದಾರೆ. ರೋಗಿಯು ಸಂಪೂರ್ಣ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

ಆಸ್ಪತ್ರೆಯ ನಿರ್ದೇಶಕರು ಹಾಗೂ ವ್ಯವಸ್ತಾಪಕರಾದ ಡಾ.ಫಾರುಖ್ ಮಣೂರ, ಮೂಳೆ ಶಸ್ತ್ರಜ್ಞ, ಡಾ.ವೀವೆಕ ವಿರೇಶ, ಸ್ತ್ರೀ ರೋಗ ತಜ್ಞೆ, ಡಾ. ಪ್ರತಿಭಾ ಶಿಡ್ಲಿ, ಐಸಿಯು ತಂಡ ಡಾ.ಅನಿಲ ಎಸ್‍.ಕೆ ಇತರರ ಕಾರ್ಯವು ಶ್ಲಾಘನಿಯವಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss