ಬ್ರಿಟನ್ ಪ್ರಧಾನಿ ರೇಸ್‌: ಐದನೇ ಸುತ್ತಿನಲ್ಲೂ ಅಗ್ರಸ್ಥಾನ ಪಡೆದ ರಿಷಿ ಸುನಕ್

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಬ್ರಿಟನ್ ಪ್ರಧಾನಿ ರೇಸ್‌ನಲ್ಲಿ ಭಾರತೀಯ ಮೂಲದ ರಿಷಿ ಸುನಕ್ ಐದನೇ ಸುತ್ತಿನಲ್ಲಿ ಅಗ್ರಸ್ಥಾನ ಪಡೆದಿದ್ದು, 137 ಮತಗಳನ್ನು ಪಡೆದಿದ್ದಾರೆ.
ಇನ್ನು ಐದನೇ ಸುತ್ತಿನ ಮತದಾನದಲ್ಲಿ 105 ಮತಗಳ ಪಡೆದ ವ್ಯಾಪಾರ ಸಚಿವ ಪೆನ್ನಿ ಮೊರ್ಡಾಂಟ್ ಪ್ರಧಾನಿ ರೇಸ್‌ನಿಂದ ಹೊರಗುಳಿದಿದ್ದಾರೆ. ಈಗ ಸುನಕ್ ಲಿಜ್ ಟ್ರಸ್ ಅವರನ್ನ ಎದುರಿಸಲಿದ್ದು, ಅವ್ರು 113 ಮತಗಳನ್ನ ಪಡೆದಿದ್ದಾರೆ.
ಎಲ್ಲಾ ಐದು ಹಂತಗಳಲ್ಲಿ ರಿಷಿ ಸುನಕ್ ಅತಿ ಹೆಚ್ಚು ಮತಗಳನ್ನ ಪಡೆದಿದ್ದಾರೆ. ನಾಲ್ಕನೇ ಸುತ್ತಿನ ಮತದಾನದಲ್ಲಿ 118 ಮತಗಳನ್ನ ಪಡೆದಿದ್ರೆ, ಸೋಮವಾರ ನಡೆದ ಮೂರನೇ ಸುತ್ತಿನ ಮತದಾನದಲ್ಲಿ 115 ಮತಗಳನ್ನ ಪಡೆದಿದ್ದರು.
ಸುನಕ್ ಎಲ್ಲಾ ಹಂತಗಳಲ್ಲಿ ಅಗ್ರಸ್ಥಾನದಲ್ಲಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!