BIG NEWS | ಕೊಡಗಿನಲ್ಲಿ ಗೋ ಸಾಗಾಟ ವಾಹನಕ್ಕೆ ಬೆಂಕಿ

ಹೊಸ ದಿಗಂತ ವರದಿ, ಮಡಿಕೇರಿ:

ಗೋಕಳ್ಳತನಕ್ಕೆ ಯತ್ನಿಸುತ್ತಿದ್ದ ಜೀಪ್ ಅವಘಡಕ್ಕೀಡಾಗಿ ಬೆಂಕಿ ಹತ್ತಿಕೊಂಡ ಘಟನೆ ಮರಗೋಡು ಗ್ರಾಮದಲ್ಲಿ ನಡೆದಿದೆ.
ಗ್ರಾಮದ ನಿವಾಸಿ ಪಾರೆಮನೆ ರವೀಂದ್ರ ಎಂಬವರಿಗೆ ಸೇರಿದ ಎರಡು ಗೋವುಗಳನ್ನು ಅಪಹರಿಸಿದ ಗೋವು ಕಳ್ಳರು ಜೀಪಿನಲ್ಲಿ ಸಾಗಿಸುತ್ತಿದ್ದರೆನ್ನಲಾಗಿದೆ.
ಗೋಕಳ್ಳತನ ಮಾಡಿ ತಪ್ಪಿಸಿಕೊಳ್ಳುವ ಯತ್ನದಲ್ಲಿ ಜೀಪು ಅಪಘಾತಕ್ಕೀಡಾಗಿದ್ದು, ಅಪಘಾತದ ರಭಸಕ್ಕೆ ವಾಹನದಲ್ಲಿ ಬೆಂಕಿ ಹೊತ್ತಿಕೊಂಡಿದೆ.ಈ ಸಂದರ್ಭ ವಾಹನವನ್ನು ಬಿಟ್ಟು ಗೋಕಳ್ಳರು ಪರಾರಿಯಾಗಿದ್ದಾರೆ.

ರಸ್ತೆತಡೆ ಪ್ರತಿಭಟನೆ
ಗೋವುಗಳನ್ನ ಕದ್ದೋಯ್ಯಲು ಯತ್ನಿಸಿದ ಆರೋಪಿಗಳನ್ನು ಬಂಧಿಸುವಂತೆ ಒತ್ತಾಯಿಸಿ ಹಿಂದೂ ಸಂಘಟನೆಗಳು ಬುಧವಾರ ಮರಗೋಡು ಜಂಕ್ಷನ್’ನಲ್ಲಿ ಪ್ರತಿಭಟನೆ ನಡೆಸಿದವು. ಪ್ರತಿಭಟನಾಕಾರರು ಮಾನವ ಸರಪಳಿ ನಿರ್ಮಿಸಿ ರಸ್ತೆ ತಡೆ ನಡೆಸಿ ಅಸಮಾಧಾನ ವ್ಯಕ್ತಪಡಿಸಿದರು. ಗೋ ಕಳ್ಳರನ್ನು ಬಂಧಿಸಿ ಸೂಕ್ತ ಶಿಕ್ಷೆ ನೀಡುವಂತೆ ಒತ್ತಾಯಿಸಿದರು.
ಸ್ಥಳಕ್ಕೆ ಡಿವೈಎಸ್ಪಿ ಗಜೇಂದ್ರ ಪ್ರಸಾದ್ ಹಾಗೂ ಸಿಐ ರವಿಕಿರಣ್ ಭೇಟಿ ನೀಡಿ ಪ್ರತಿಭಟನಾಕಾರರ ಅಹವಾಲು ಸ್ವೀಕರಿಸಿದರು. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಈ ಸಂದರ್ಭ ಹಿಂದೂ ಜಾಗರಣ ವೇದಿಕೆಯ ಜಿಲ್ಲಾ ಸಂಯೋಜಕ ಕುಕ್ಕೇರ ಅಜಿತ್ ಮಾತನಾಡಿ, ಈ ಭಾಗದಲ್ಲಿ ನಿರಂತರ ಗೋ ಸಾಗಾಟ ನಡೆಯುತ್ತಿದೆ, ಸಂಘಟನೆಗೆ ತಿಳಿಯುವ ವಿಷಯ ಪೊಲೀಸ್ ಇಲಾಖೆಗೆ ತಿಳಿಯುತ್ತಿಲ್ಲ. ಗೋಕಳ್ಳರಿಗೆ ಸಹಕರಿಸುತ್ತಿರುವ ಬಗ್ಗೆ ಅನುಮಾನ ಇದೆ ಎಂದು ಆರೋಪಿಸಿದರು.
ಗೋವುಗಳನ್ನು ಕದ್ದೊಯ್ಯುತ್ತಿರುವ ಕಿಡಿಗೇಡಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ಹಿಂದೂ ಜಾಗರಣ ವೇದಿಕೆ ಜಿಲ್ಲಾ ಪ್ರಚಾರ ಪ್ರಮುಖ್ ಕುಮಾರ್, ಪ್ರಮುಖರಾದ ಸುನಿಲ್ ಮಾದಾಪುರ, ವಿನಯ್ ಮಡಿಕೇರಿ, ಮಡಿಕೇರಿ ತಾಲೂಕು ಸಂಯೋಜಕ್ ಎಂ. ಬೆಳ್ಳಿಯಪ್ಪ, ತಾಲೂಕು ಸಹ ಸಂಯೋಜಕ್ ಮನು ರೈ, ಬಿಜೆಪಿ ಮಡಿಕೇರಿ ತಾಲೂಕು ಅಧ್ಯಕ್ಷ ಕಾಂಗೀರ ಸತೀಶ್, ಪ್ರಮುಖರಾದ ಮುಕ್ಕಾಟಿ ಚಿದಂಬರ, ಬಳಪದ ಮೋಹನ್, ರಘು ಆನಂದ, ಪ್ರಭು ಶೇಖರ್ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!