Sunday, September 25, 2022

Latest Posts

ಭಾರತಕ್ಕೆ 3ಬಾರಿ ಭೇಟಿ ನೀಡಿದ್ದ ರಾಣಿ ಎಲಿಜಬೆತ್-2: ಯಾವ್ಯಾವ ಸ್ಥಳ ಗೊತ್ತಾ..?

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಬ್ರಿಟನ್‌ನ ರಾಣಿ ಎಲಿಜಬೆತ್ II (96 ವರ್ಷ) ಗುರುವಾರ ಸ್ಕಾಟ್ಲೆಂಡ್‌ನ ಬಾಲ್ಮೋರಲ್ ಕ್ಯಾಸಲ್‌ನಲ್ಲಿ ನಿಧನರಾದರು. 70 ವರ್ಷಗಳ ಕಾಲ ಬ್ರಿಟನ್ ರಾಣಿಯಾಗಿ ದೇಶವನ್ನಾಳಿದರು. 2015 ರಲ್ಲಿ, ಎಲಿಜಬೆತ್ II ಬ್ರಿಟನ್‌ ಆಳಿದ ದೀರ್ಘಾವಧಿಯ ರಾಣಿ ಎಂದು ಕರೆಸಿಕೊಂಡು  ರಾಣಿ ವಿಕ್ಟೋರಿಯಾ ಆಳ್ವಿಕೆಯ ದಾಖಲೆಯನ್ನು ಮುರಿದರು (ಕ್ವೀನ್‌ ವಿಕ್ಟೋರಿಯಾ ಆಡಳಿತಾವಧಿ 63 ವರ್ಷ 7 ತಿಂಗಳು 2 ದಿನಗಳು).

ರಾಣಿ ಎಲಿಜಬೆತ್  100 ಕ್ಕೂ ಹೆಚ್ಚು ದೇಶಗಳಿಗೆ ಪ್ರಯಾಣಿಸಿದ್ದಾರೆ. ಕೆನಡಾಗೆ ಅತೀ ಹೆಚ್ಚು ಅಂದರೆ 22 ಬಾರಿ ಭೇಟಿ ನೀಡಿದ್ದಾರೆ. ಎಲಿಜಬೆತ್-2 ಭಾರತಕ್ಕೆ ಮೂರು ಬಾರಿ ಭೇಟಿ ನೀಡಿದ್ದು, 1961, 1983 ಮತ್ತು 1997 ರಲ್ಲಿ ಪ್ರವಾಸ ಮಾಡಿದರು.

Queen Elizabeth during her visit to India

ಭಾರತದ ಸ್ವಾತಂತ್ರ್ಯದ ಬಳಿಕ ಸುಮಾರು 15 ವರ್ಷಗಳ ನಂತರ ಅವರು ಮೊದಲ ಬಾರಿಗೆ ಭಾರತಕ್ಕೆ ಭೇಟಿ ನೀಡಿದರು. ರಾಣಿ ಎಲಿಜಬೆತ್ ಮತ್ತು ಅವರ ಪತಿ ಪ್ರಿನ್ಸ್ ಫಿಲಿಪ್ 1961 ರಲ್ಲಿ ಮೊದಲ ಬಾರಿಗೆ ಭಾರತಕ್ಕೆ ಬಂದರು. ತಾಜ್ ಮಹಲ್ ಸೇರಿದಂತೆ ದೇಶದ ಅತ್ಯಂತ ನೆಚ್ಚಿನ ಐತಿಹಾಸಿಕ ಸ್ಥಳಗಳನ್ನು ವೀಕ್ಷಿಸಿದರು. ಜವಾಹರ್ ಲಾಲ್ ನೆಹರು ಪ್ರಧಾನಿಯಾಗಿದ್ದಂತಹ ಸಂದರ್ಭದಲ್ಲಿ ನವದೆಹಲಿಯ ರಾಜ್ ಪಥ್ ನಲ್ಲಿ ನಡೆದ ಗಣರಾಜ್ಯೋತ್ಸವ ಸಮಾರಂಭದಲ್ಲಿ ಭಾಗವಹಿಸಿದ್ದರು.

Queen Elizabeth at the Taj Mahal in 1961

1961 ರಲ್ಲಿ ಎಲಿಜಬೆತ್-11 ಅವರು ಭಾರತಕ್ಕೆ ಭೇಟಿ ನೀಡಿದ ಭಾಗವಾಗಿ ರಾಜ್ ಘಾಟ್‌ಗೆ ಭೇಟಿಯಿತ್ತು ಮಹಾತ್ಮ ಗಾಂಧಿ ಸ್ಮಾರಕಕ್ಕೆ ಪುಷ್ಪಗುಚ್ಛವನ್ನು ಸಮರ್ಪಿಸಿದರು. ಗಾಂಧಿ ಸಮಾಧಿಯಲ್ಲಿರುವ ಸಂದರ್ಶಕರ ಪುಸ್ತಕದಲ್ಲಿ ರಾಣಿ ಹಲವು ಕಾಮೆಂಟ್‌ಗಳನ್ನು ಬರೆದಿದ್ದಾರೆ. ತನ್ನ ಸಹಿ ಬೇರೇನೂ ಬರೆಯದ ಆಕೆ ಮೊದಲ ಸಲ ಸಂದರ್ಶಕರ ಪುಸ್ತಕದಲ್ಲಿ ಗಾಂಧೀಜಿಯವರ ಬಗ್ಗೆ ಬರೆದಿದ್ದಾರೆ.

The Queen and Prince Philip's signatures in the visitors' book

1961 ರ ಭೇಟಿಯ ಸಮಯದಲ್ಲಿ, ಅಂದಿನ ರಾಷ್ಟ್ರಪತಿ ರಾಜೇಂದ್ರ ಪ್ರಸಾದ್ ಅವರೊಂದಿಗೆ ಆಲ್ ಇಂಡಿಯಾ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ (AIIMS) ಕಟ್ಟಡವನ್ನು ಉದ್ಘಾಟಿಸಿದರು.

Queen Elizabeth and The Maharaja of Jaipur, Sawai Man Singh II, ride on an elephant on February 6, 1961.

ಆಗ್ರಾ, ಬಾಂಬೆ (ಈಗಿನ ಮುಂಬೈ), ಬನಾರಸ್ (ಈಗಿನ ವಾರಣಾಸಿ), ಉದಯಪುರ, ಜೈಪುರ, ಬೆಂಗಳೂರು, ಮದ್ರಾಸ್ (ಈಗ ಚೆನ್ನೈ), ಕಲ್ಕತ್ತಾ (ಈಗಿನ ಕೋಲ್ಕತ್ತಾ) ಗೆ ಭೇಟಿ ನೀಡಿದರು. ವಾರಣಾಸಿಯಲ್ಲಿ ಮಹಾರಾಜರ ಆತಿಥ್ಯವನ್ನು ಸ್ವೀಕರಿಸಿ ಆನೆಯ ಮೇಲೆ ಮೆರವಣಿಗೆಯಲ್ಲಿ ಸಾಗಿದರು.

Elizabeth-11 riding an elephant in Varanasi

 

ರಾಣಿ ಎಲಿಜಬೆತ್ 1983 ರಲ್ಲಿ ಮತ್ತೊಮ್ಮೆ ಭಾರತಕ್ಕೆ ಭೇಟಿ ನೀಡಿದರು. ಆಗ ಇಂದಿರಾಗಾಂಧಿ ಪ್ರಧಾನಿಯಾಗಿದ್ದರು.

Queen Elizabeth meets then Prime Minister Indira Gandhi at Hyderabad House in New Delhi in 1983.

1983 ರಲ್ಲಿ, ಅಂದಿನ ರಾಷ್ಟ್ರಪತಿ ಗಿಯಾನಿ ಜೈಲ್ ಸಿಂಗ್ ಅವರ ಆಹ್ವಾನದ ಮೇರೆಗೆ ರಾಣಿ ಮತ್ತು ರಾಜಕುಮಾರ ದೇಶಕ್ಕೆ ಭೇಟಿ ನೀಡಿದರು. ಆಗ ರಾಜ ದಂಪತಿಗಳು ರಾಷ್ಟ್ರಪತಿ ಭವನದಲ್ಲಿ ತಂಗಿದ್ದರು. ಈ ಭೇಟಿಯ ಭಾಗವಾಗಿ, ರಾಣಿ ಮದರ್ ತೆರೇಸಾ ಅವರಿಗೆ ಗೌರವಾನ್ವಿತ ಆರ್ಡರ್ ಆಫ್ ಮೆರಿಟ್ ಅನ್ನು ನೀಡಿದರು.

Queen Elizabeth presents the Order of Merit to Mother Teresa in 1983 in Delhi. (Getty Image)

1997 ರಲ್ಲಿ ಭಾರತದ ಸ್ವಾತಂತ್ರ್ಯದ 50 ವರ್ಷಗಳನ್ನು ಪೂರೈಸಿದ ಸಂದರ್ಭದಲ್ಲಿ ರಾಣಿ ಮೂರನೇ ಬಾರಿಗೆ ಭಾರತಕ್ಕೆ ಭೇಟಿ ನೀಡಿದರು. ಈ ಸಂದರ್ಭದಲ್ಲಿ ಎಲಿಜಬೆತ್ ಅಮೃತಸರದ ಜಲಿಯನ್ ವಾಲಾಬಾಗ್ ಸ್ಮಾರಕಕ್ಕೆ ಭೇಟಿ ನೀಡಿದರು.

The Queen makes her way from the Golden Temple of Amritsar.

1997 ರಲ್ಲಿ, ನಟ ಕಮಲ್ ಹಾಸನ್ ಅಭಿನಯದ ಪ್ರತಿಷ್ಠಿತ ಚಿತ್ರ ಮರುದನಾಯಗಮ್‌ನ ಸೆಟ್‌ಗೆ ಸಹ ಭೇಟಿ ನೀಡಿದ್ದರು. ಎಲಿಜಬೆತ್-2 ಚೆನ್ನೈನ ಎಂಜಿಆರ್ ಫಿಲ್ಮ್ ಸಿಟಿ ತಲುಪಿ ಸುಮಾರು 20 ನಿಮಿಷ ಕಳೆದರು

Actor Kamal Haasan with Quinn Elizabeth-11 at MJR Film City

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!