ದೆಹಲಿಯಲ್ಲಿ ಮಹಿಳಾ ಮೀಸಲಾತಿ ಉಪವಾಸ ಸತ್ಯಾಗ್ರಹ: 18 ಪಕ್ಷಗಳ ಬೆಂಬಲ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ವಿರೋಧ ಪಕ್ಷಗಳ ಧರಣಿಗಳಿಂದ ರಾಷ್ಟ್ರ ರಾಜಧಾನಿಯಲ್ಲಿ ರಾಜಕೀಯ ತಾಪಮಾನ ಇದ್ದಕ್ಕಿದ್ದಂತೆ ಹೆಚ್ಚಾಗಿದೆ. ವಿಶೇಷವಾಗಿ ಬಿಆರ್‌ಎಸ್ ಮಹಿಳಾ ನಾಯಕಿ, ಎಂಎಲ್‌ಸಿ ಕವಿತಾ ಭಾರತ ಜಾಗೃತಿ ನೇತೃತ್ವದಲ್ಲಿ ಮಹಿಳಾ ಮೀಸಲಾತಿ ಕುರಿತು ಜಂತರ್ ಮಂತರ್‌ನಲ್ಲಿ ಉಪವಾಸ ಸತ್ಯಾಗ್ರಹ ಕೈಗೊಂಡಿದ್ದಾರೆ. ಬೆಳಗ್ಗೆಯಿಂದಲೇ ಹಲವು ಮಹಿಳಾ ಕಾರ್ಯಕರ್ತರು ಕವಿತಾ ಅವರನ್ನು ಬೆಂಬಲಿಸಲು ಆಗಮಿಸುತ್ತಿದ್ದಾರೆ.

ಮಹಿಳಾ ಮೀಸಲಾತಿಗಾಗಿ ಎಂಎಲ್ ಸಿ ಕವಿತಾ ನಡೆಸುತ್ತಿರುವ ಒಂದು ದಿನದ ಉಪವಾಸ ಸತ್ಯಾಗ್ರಹಕ್ಕೆ ಸಿದ್ಧತೆಗಳು ಪೂರ್ಣಗೊಂಡಿವೆ. ಬೆಳಗ್ಗೆ 11 ಗಂಟೆಗೆ ಜಂತರ್ ಮಂತರ್ ನಲ್ಲಿ ಕವಿತಾ ದೀಕ್ಷೆ ಆರಂಭವಾಗಿದೆ. ಸಂಜೆ 5ರವರೆಗೆ ಸತ್ಯಾಗ್ರಹ ನಡೆಯಲಿದೆ. ಕವಿತಾಗೆ ದೇಶದ 18 ಪಕ್ಷಗಳು ಬೆಂಬಲ ಘೋಷಿಸಿವೆ. ಆಯಾ ಪಕ್ಷಗಳ ಮುಖಂಡರು ಆಕೆಯನ್ನು ಬೆಂಬಲಿಸುವ ಕಾರ್ಯದಲ್ಲಿ ತೊಡಗಿದ್ದಾರೆ.

ಎಎಪಿ, ಅಕಾಲಿದಳ, ಜೆಡಿಯು, ಆರ್‌ಜೆಡಿ ಮುಖಂಡರು ಭಾಗವಹಿಸಲಿದ್ದಾರೆ. ಸಮಾಜವಾದಿ, ಸಿಪಿಐ, ಸಿಪಿಎಂ, ಎನ್‌ಸಿಪಿ ಮತ್ತು ಶಿವಸೇನೆ (ಠಾಕ್ರೆ) ಪಕ್ಷಗಳು ಕವಿತಾಗೆ ಒಗ್ಗಟ್ಟು ಘೋಷಿಸಿದವು. ಮಹಿಳಾ ಮಸೂದೆ ಜಾರಿ ಹೋರಾಟಕ್ಕೆ ರಾಷ್ಟ್ರೀಯ ಲೋಕದಳ, ಜಾರ್ಖಂಡ್ ಮುಕ್ತಿಮೋರ್ಚಾ ಮತ್ತು ಡಿಎಂಕೆ ಬೆಂಬಲ ಸೂಚಿಸಿವೆ.

27 ವರ್ಷಗಳಿಂದ ಬಾಕಿ ಉಳಿದಿರುವ ಮಹಿಳಾ ವಿಧೇಯಕವನ್ನು ಕೂಡಲೇ ಜಾರಿಗೊಳಿಸುವಂತೆ ಕವಿತಾ ಒತ್ತಾಯಿಸುತ್ತಿದ್ದಾರೆ. ವಾಜಪೇಯಿ ಸರಕಾರ ತಂದ ಈ ಮಸೂದೆ ಇನ್ನೂ ಬಾಕಿ ಇದೆ. ಕಳೆದ ಎರಡು ಸಾರ್ವತ್ರಿಕ ಚುನಾವಣೆಗಳಲ್ಲಿ ಮಹಿಳಾ ಮೀಸಲಾತಿ ಮಸೂದೆಯ ಭರವಸೆಯನ್ನು ಬಿಜೆಪಿ ಸುಳ್ಳಾಗಿಸಿದೆ ಎಂದು ಆರೋಪಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!