Friday, March 31, 2023

Latest Posts

SHOCKING | ಯಮನಾಗಿ ಬಂತು ಗ್ಯಾಸ್ ಗೀಸರ್, ಉಸಿರುಗಟ್ಟಿ ನವದಂಪತಿ ಸಾವು!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮುಂಬೈನ ಘಾಟ್‌ಕೋಪರ್‌ನಲ್ಲಿ ನವವಿವಾಹಿತರು ಗ್ಯಾಸ್‌ಗೀಸರ್‌ನಿಂದ ಉಸಿರುಗಟ್ಟಿ ಮೃತಪಟ್ಟಿದ್ದಾರೆ. ದೀಪಕ್ ಷಾ ಹಾಗೂ ಟೀನಾ ಶಾ ಹೋಳಿಹಬ್ಬದ ನಂತರ ಸ್ನಾನಕ್ಕೆಂದು ಬಾತ್‌ರೂಂಗೆ ತೆರಳಿದ್ದು, ಉಸಿರುಗಟ್ಟಿ ಮೃತಪಟ್ಟಿದ್ದಾರೆ.

ಎಂದಿನಂತೆ ಮನೆಯ ಕೆಲಸದಾಕೆ ಬಾಗಿಲು ಬಡಿದಿದ್ದು, ಎಷ್ಟು ಸಮಯವಾದರೂ ಯಾರೂ ಬಾಗಿಲು ತೆಗೆದಿಲ್ಲ, ಫೋನ್‌ಗೆ ಉತ್ತರಿಸಿಲ್ಲ. ಗಾಬರಿಯಾಗಿ ಪೊಲೀಸರಿಗೆ ಮಾಹಿತಿ ನೀಡಿದ್ದು, ಬಾತ್‌ರೂಂನಲ್ಲಿ ಇಬ್ಬರ ಶವ ಪತ್ತೆಯಾಗಿದೆ. ಗ್ಯಾಸ್ ಗೀಸರ್ ಬಳಕೆ ಮಾಡುತ್ತಿದ್ದು, ಗ್ಯಾಸ್ ಲೀಕ್‌ನಿಂದಾಗಿ ಉಸಿರುಗಟ್ಟಿ ಮೃತಪಟ್ಟಿದ್ದಾರೆ. ಪೊಲೀಸರು ಆಕಸ್ಮಿಕ ಸಾವು ದಾಖಲಿಸಿಕೊಂಡಿದ್ದಾರೆ.

Mumbai Couple Found Dead In Bathroom, Of Suspected Geyser Gas Leak, Hours After Playing Holiಬಾತ್‌ರೂಂನಲ್ಲಿ ವೆಂಟಿಲೇಷನ್‌ಗೆ ಅವಕಾಶ ನೀಡಿ, ಆದಷ್ಟು ಗೀಸರ್‌ಗಳ ಮೊರೆ ಹೋಗದೆ ಸೋಲಾರ್ ನೀರು ಬಳಸಿ. ಬಕೆಟ್‌ಗೆ ಬಿಸಿ ನೀರು ಬಿಡುವಾಗ ಬಾಗಿಲು ತೆರೆದಿರಲಿ. ದೀರ್ಘಕಾಲದ ವರೆಗೆ ಎಲೆಕ್ಟ್ರಿಕ್ ಗೀಝರ್ ಹೀಟ್ ಆಗಲು ಬಿಡಬೇಡಿ. ಹಳೆಯ ಗೀಝರ್ ಆದರೆ ಅದನ್ನು ಬದಲಾಯಿಸಿ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!