October 9, 2026
Friday, October 9, 2026
spot_img

ಬೃಹತ್ ಬೆಂಗಳೂರು ಪಾಲಿಕೆ ರಣಕಣ ಸಿದ್ಧ: ಐದು ಪಾಲಿಕೆಗಳ ವಾರ್ಡ್ ಮರುವಿಂಗಡಣೆ, ಮೀಸಲಾತಿ ಪಟ್ಟಿ ಫೈನಲ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಗ್ರೇಟರ್‌ ಬೆಂಗಳೂರು ಪ್ರಾಧಿಕಾರ ವ್ಯಾಪ್ತಿಗೆ ಬರುವ ಐದು ನಗರ ಪಾಲಿಕೆಗಳ ಚುನಾವಣೆಗೆ ಸಂಬಂಧಿಸಿದಂತೆ ಬಹು ನಿರೀಕ್ಷಿತ ವಾರ್ಡ್‌ ಮೀಸಲಾತಿ ಪಟ್ಟಿಯನ್ನು ಬೆಂಗಳೂರು ನಗರಾಭಿವೃದ್ಧಿ ಇಲಾಖೆ ಇಂದು ಅಧಿಕೃತವಾಗಿ ಪ್ರಕಟಿಸಿದೆ.

ಈ ಹಿಂದಿದ್ದ 368 ವಾರ್ಡ್‌ಗಳ ಸಂಖ್ಯೆಯನ್ನು ಪರಿಷ್ಕರಿಸಿ, ಅಂತಿಮವಾಗಿ ಒಟ್ಟು 369 ವಾರ್ಡ್‌ಗಳಿಗೆ ಸೀಮಿತಗೊಳಿಸಲಾಗಿದೆ. ಗಮನಾರ್ಹವಾಗಿ, ಬೆಂಗಳೂರು ಪಶ್ಚಿಮ ಪಾಲಿಕೆ ವ್ಯಾಪ್ತಿಯಲ್ಲಿ ಒಂದು ಹೆಚ್ಚುವರಿ ವಾರ್ಡ್‌ ಸೇರ್ಪಡೆಯಾಗಿದೆ.

ಈ ಅಂತಿಮ ಪಟ್ಟಿಯು ಅಕ್ಟೋಬರ್‌ 15ರವರೆಗೆ ಸಾರ್ವಜನಿಕರಿಂದ ಪಡೆದ ಆಕ್ಷೇಪಣೆ ಮತ್ತು ಸಲಹೆಗಳನ್ನು ಪರಿಗಣಿಸಿ ರೂಪಿಸಲಾಗಿದೆ. ಈ ಪ್ರಕ್ರಿಯೆಯಲ್ಲಿ ಗಡಿ ರೇಖೆ ಹಾಗೂ ರಸ್ತೆಗಳಂತಹ ಅಂಶಗಳನ್ನು ವಾರ್ಡ್‌ಗಳ ಗಡಿಗಳಾಗಿ ಪರಿಷ್ಕರಿಸಿ ಸರ್ಕಾರಕ್ಕೆ ವರದಿ ಸಲ್ಲಿಸಲಾಗಿತ್ತು. ಅದರ ಆಧಾರದ ಮೇಲೆ, ಈಗ ಅಧಿಕೃತವಾಗಿ 369 ವಾರ್ಡ್‌ಗಳಾಗಿ ವಿಂಗಡಿಸಿ ಪಟ್ಟಿಯನ್ನು ಪ್ರಕಟಿಸಲಾಗಿದೆ.

ಕ್ರಮ ಸಂಖ್ಯೆನಗರ ಪಾಲಿಕೆಯ ಹೆಸರುವಾರ್ಡ್‌ಗಳ ಸಂಖ್ಯೆ
1ಬೆಂಗಳೂರು ದಕ್ಷಿಣ ನಗರ ಪಾಲಿಕೆ72 ವಾರ್ಡ್‌ಗಳು
2ಬೆಂಗಳೂರು ಉತ್ತರ ನಗರ ಪಾಲಿಕೆ72 ವಾರ್ಡ್‌ಗಳು
3ಬೆಂಗಳೂರು ಪಶ್ಚಿಮ ನಗರ ಪಾಲಿಕೆ112 ವಾರ್ಡ್‌ಗಳು
4ಬೆಂಗಳೂರು ಪೂರ್ವ ನಗರ ಪಾಲಿಕೆ50 ವಾರ್ಡ್‌ಗಳು
5ಬೆಂಗಳೂರು ಕೇಂದ್ರ ನಗರ ಪಾಲಿಕೆ63 ವಾರ್ಡ್‌ಗಳು
ಒಟ್ಟು ವಾರ್ಡ್‌ಗಳ ಸಂಖ್ಯೆ369 ವಾರ್ಡ್‌ಗಳು

ಈ ಅಂತಿಮ ಪಟ್ಟಿ ಪ್ರಕಟವಾಗಿರುವ ಹಿನ್ನೆಲೆಯಲ್ಲಿ, ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಚುನಾವಣೆ ಪ್ರಕ್ರಿಯೆಗಳು ಶೀಘ್ರದಲ್ಲಿ ಆರಂಭಗೊಳ್ಳುವ ನಿರೀಕ್ಷೆ ಇದೆ.

Must Read