ಮಧ್ಯಪ್ರದೇಶದಲ್ಲಿ ಅಮಾನುಷ ಘಟನೆ: ನಡುರಸ್ತೆಯಲ್ಲೇ ಗರ್ಭಿಣಿಯನ್ನು ಹತ್ಯೆಗೈದ ದರೋಡೆಕೋರರು

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮಧ್ಯಪ್ರದೇಶದ ಜಬಲ್‌ಪುರದಲ್ಲಿ ಈ ಘಟನೆ ನಡೆದಿದ್ದು, ದರೋಡೆ ಮಾಡಲು ಬಂದವರು ನಡುರಸ್ತೆಯಲ್ಲಿ ಸೀರೆಯಿಂದ ಕತ್ತು ಹಿಸುಕಿ ಗರ್ಭಿಣಿಯನ್ನು ಕೊಂದಿದ್ದಾರೆ. ಮೊದಲು ಕಾರಿನ ಮೇಲೆ ಕಲ್ಲು ತೂರಾಟ ನಡೆಸಿ, ಸೀರೆಯಿಂದ ಗರ್ಭಿಣಿಯ ಕತ್ತು ಹಿಸುಕಿ ಕೊಲೆ ಮಾಡಿದ್ದಾರೆ. ಧೋಟಾಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಶನಿವಾರ ತಡರಾತ್ರಿ ಈ ಘಟನೆ ನಡೆದಿದೆ.

ಪಟ್ಬಾಬಾದಿಂದ ಹಿಂದಿರುಗಿದ ನಂತರ, ಮದರ್ ತೆರೆಸಾ ನಗರದಲ್ಲಿರುವ ತನ್ನ ಅತ್ತೆಯ ಮನೆಗೆ ಹೋಗಲು ಬೊಲೆರೋ ಕಾರಿನಲ್ಲಿ ಹೊರಟಿದ್ದಾಗ, ದಾರಿಯಲ್ಲಿ 3-4 ದುಷ್ಕರ್ಮಿಗಳು ಅಡ್ಡಗಟ್ಟಿದ್ದರು. ಮಹಿಳೆಯನ್ನು ಹತ್ಯೆ ಮಾಡಿ ಬಳಿಕ ಆಕೆಯ ಪತಿಯನ್ನೂ ಥಳಿಸಿದ್ದಾರೆ. ಇದೀಗ ಶುಭಂ ಸ್ಥಿತಿ ಚಿಂತಾಜನಕವಾಗಿದೆ.

ಶುಭಂ ಅವರ ತಲೆಗೆ ಇಟ್ಟಿಗೆಯಿಂದ ಹೊಡೆದು ಹಲ್ಲೆ ನಡೆಸಿದ್ದಾರೆ. ಹೆಂಡತಿಯ ಮಂಗಳಸೂತ್ರ ತೆಗೆದುಕೊಂಡು ಓಡಿ ಹೋಗಿದ್ದಾರೆ. ಮಾಹಿತಿ ಪಡೆದ ತಕ್ಷಣ ಮಾಧೋಳ ಠಾಣೆ ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ. ತನಿಖೆ ಮುಂದುವರೆದಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!