ಪರಿಸರವಾದಿಗಳ ದ್ವಂದ್ವ ನಿಲುವಿನಿಂದ ಕೊಡಗಿನ ಜನತೆ ತೊಂದರೆ: ನಂದ ಸುಬ್ಬಯ್ಯ

ಹೊಸದಿಗಂತ ವರದಿ ಮಡಿಕೇರಿ:

ಪರಿಸರವಾದಿಗಳ ದ್ವಂದ ನಿಲುವಿನಿಂದ ಕೊಡಗಿನ ಜನತೆಗೆ ತೊಂದರೆಯಾಗುತ್ತಿದ್ದು, ಪರಿಸರ ರಕ್ಷಣೆಯ ಜೊತೆಗೆ ಅಭಿವೃದ್ಧಿ ಕೆಲಸಗಳೂ ನಡೆಯುವಂತಾಗಬೇಕು ಎಂದು ಸಾಮಾಜಿಕ ಕಾರ್ಯಕರ್ತ ಚೇರಂಡ ನಂದ ಸುಬ್ಬಯ್ಯ ಅಭಿಪ್ರಾಯಪಟ್ಟರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಿವೃತ್ತ ಕರ್ನಲ್ ಸಿ.ಪಿ ಮುತ್ತಣ್ಣ ಅವರು ತಮ್ಮ ಖಾಸಗಿ ತೋಟದಲ್ಲಿ ನಿಯಮಬದ್ಧವಾಗಿ ಕೆಲವು ಮರಗಳನ್ನು ಕಡಿಯಲಾಗಿದೆ. ಯಾವುದೇ ಅಕ್ರಮ ಮಾಡಿಲ್ಲ ಎಂದು ಸಮರ್ಥಿಸಿಕೊಂಡಿದ್ದು, ಇದಕ್ಕೆ ನಮ್ಮ ಆಕ್ಷೇಪವಿಲ್ಲ. ಆದರೆ, ಇತರರು ತಮ್ಮ ಅಗತ್ಯಕ್ಕೆ ತಮ್ಮ ತೋಟದಲ್ಲಿ ಮರಗಳನ್ನು ಕಡಿಯುವ ವೇಳೆಯಲ್ಲಿ ಆಕ್ಷೇಪ ವ್ಯಕ್ತಪಡಿಸುವ ಮೂಲಕ ಇಬ್ಬಂದಿತನ ಅನುಸರಿಸುವುದು ಸರಿಯಾದ ಕ್ರಮವಲ್ಲ ಎಂದು ಟೀಕಿಸಿದರು.
400ಕೆ.ವಿ ವಿದ್ಯುತ್ ಲೈನ್ ಸಂಪರ್ಕ ಕಲ್ಪಿಸುವ ವಿಚಾರದಲ್ಲಿ ತಾನು ಪವರ್ ಕಾರ್ಪೋರೇಷನ್ ಏಜಂಟರಂತೆ ಕಾರ್ಯನಿರ್ವಹಿಸಿಸುತ್ತಿರುವುದಾಗಿ ಆರೋಪ ಮಾಡಿರುವ ಕರ್ನಲ್ ಮುತ್ತಣ್ಣ ಅವರು, ದಾಖಲೆಗಳು ಇದ್ದರೆ ಒದಗಿಸಲಿ ಎಂದು ಸವಾಲು ಹಾಕಿದ ನಂದ ಸುಬ್ಬಯ್ಯ, ನಾನು ಈ ರೀತಿ ಪ್ರಚಾರ ಮಾಡಿ ಯಾರಿಗಾದರೂ ಪರಿಹಾರ ಮೊತ್ತ ಸಿಗಲಿಲ್ಲ ಎಂದಾದರೆ ಈ ಬಗ್ಗೆ ಮಾಹಿತಿ ನೀಡಲಿ ಎಂದರು.
ನಾವು ಮಾಡಿರುವ ಆರೋಪಗಳಿಗೆಲ್ಲದಕ್ಕೂ ನಮ್ಮ ಬಳಿ ದಾಖಲೆಗಳಿವೆ. ಬೇಕಿದ್ದರೆ ಅವರು ಬಹಿರಂಗ ಚರ್ಚೆಗೆ ಬರಲಿ, ನಾವು ಚರ್ಚೆಗೆ ಸಿದ್ಧರಿದ್ದೇವೆ ಎಂದು ಸವಾಲು ಹಾಕಿದರು.
ದಕ್ಷಿಣ ಕೊಡಗಿನ ಬಹುಪಾಲು ಮುಳುಗಡೆಯಾಗುವ ಬರಪೊಳೆ ಯೋಜನೆಗೆ ಕರ್ನಲ್ ಮುತ್ತಣ್ಣ ಅವರ ತಂದೆ, ಅಂದಿನ ಮುಖ್ಯಮಂತ್ರಿ ಸಿ.ಎಂ.ಪೂಣಚ್ಚ ಅವರು ಶಂಕುಸ್ಥಾಪನೆ ನೆರವೇರಿಸಿದ್ದು, ಅವರ ವಿರುದ್ಧ ಹೇಳಿಕೆ ನೀಡುವುದು ಸರಿಯಾದ ಕ್ರಮವಲ್ಲ ಎಂದ ಅವರು, ಕರ್ನಲ್ ಮುತ್ತಣ್ಣ ಬರಪೊಳೆ ಇತಿಹಾಸವನ್ನು ಅಧ್ಯಯನ ಮಾಡಿ ವಿಷಯ ತಿಳಿದುಕೊಳ್ಳಲಿ ಎಂದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!