ಬಾಂಗ್ಲಾ ಗಡಿಯಲ್ಲಿ ಅಕ್ರಮ ಜಾನುವಾರು ಸಾಗಾಟ: 47 ಹಸುಗಳನ್ನು ರಕ್ಷಿಸಿದ ಬಿಎಸ್‌ಎಫ್

ಹೊಸದಿಗಂತ ಡಿಜಿಟಲದ ಡೆಸ್ಕ್:‌
ಮೇಘಾಲಯದ ಪಶ್ಚಿಮ ಖಾಸಿ ಗುಡ್ಡಗಳ ಬಳಿ ಅಕ್ರಮವಾಗಿ ಸಾಗಿಸುತ್ತಿದ್ದ 47 ಹಸುಗಳನ್ನು ಗಡಿ ರಕ್ಷಣಾ ಪಡೆಗಳು ರಕ್ಷಿಸುವಲ್ಲಿ ಸಫಲರಾಗಿದ್ದಾರೆ.

ಲಾರಿಯೊಂದರಲ್ಲಿ ಹಿಂಸಾತ್ಮಕ ರೀತಿಯಲ್ಲಿ ಜಾನುವಾರುಗಳನ್ನು ಸಾಗಿಸಲಾಗುತ್ತಿತ್ತು. ಮೇಘಾಲಯದ ಗಡಿರಕ್ಷಣಾ ಪಡೆಯ ಸಿಬ್ಬಂದಿಗಳು ಪರಿಶೀಲಿಸುವ ವೇಳೆ ಅಕ್ರಮವಾಗಿ ಸಾಗಿಸುತ್ತಿರುವುದು ಪತ್ತೆಯಾಗಿದೆ. ಲಾರಿಯಲ್ಲಿದ್ದ 47 ಹಸುಗಳನ್ನು ರಕ್ಷಿಸಲಾಗಿದ್ದು ಇವುಗಳನ್ನು ಬಾಂಗ್ಲಾದೇಶಕ್ಕೆ ಸಾಗಿಸಲಾಗುತ್ತಿತ್ತು ಎಂದು ತಿಳಿದುಬಂದಿದೆ ಎಂದು ಮೂಲಗಳು ವರದಿ ಮಾಡಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ಬಿಎಸ್‌ಎಫ್ “ರಾಷ್ಟ್ರೀಯ ಭದ್ರತೆಯನ್ನು ಕಾಪಾಡುವ ನಿಟ್ಟಿನಲ್ಲಿ ಹೆಚ್ಚಿನ ಜಾಗರೂಕತೆಯಿಂದ ಕಾರ್ಯನಿರ್ವಹಿಸಲಾಗುತ್ತಿದ್ದು ಎಲ್ಲಾ ರೀತಿಯ ಅಕ್ರಮ ಸಾಗಾಟ, ನುಸುಳುವಿಕೆಗಳನ್ನು ಪರಿಣಾಮಾತ್ಮವಾಗಿ ತಡೆಗಟ್ಟುವಲು ಕಟ್ಟುನಿಟಿನ ಕ್ರಮ ವಹಿಸಲಾಗಿದೆ” ಎಂದು ಹೇಳಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!