ಹೊಸದಿಗಂತ ಡಿಜಿಟಲ್ ಡೆಸ್ಕ್:
ಪಂಜಾಬ್‌ನ ಪಠಾಣ್‌ಕೋಟ್‌ನ ಅಂತಾರಾಷ್ಟ್ರೀಯ ಗಡಿಯಲ್ಲಿ ಇಂದು ಮುಂಜಾನೆ ಬಿಎಸ್‌ಎಫ್ ಸೈನಿಕರು ಪಾಕಿಸ್ತಾನಿ ಒಳ ನುಸುಳುಕೋರನೊಬ್ಬನನ್ನು ಗುಂಡಿಕ್ಕಿ ಹತ್ಯೆಗೈದಿದ್ದಾರೆ.
ಗಡಿ ಭದ್ರತಾ ಪಡೆ (ಬಿಎಸ್‌ಎಫ್) ಸಿಬ್ಬಂದಿ ಹಾಗೂ ಐಬಿ ತಾಷ್ಪಟನ್ ಗಡಿ ಪ್ರದೇಶದ ಉದ್ದಕ್ಕೂ ಕೆಲವು ಅನುಮಾನಾಸ್ಪದ ಚಲನವಲನಗಳನ್ನು ಗಮನಿಸಿದ್ದರು. ಅದಾಗಿ ಸ್ವಲ್ಪ ಸಮಯದಲ್ಲೇ ಒಳ ನುಸುಳುಕೋರನೊಬ್ಬ ಗಡಿ ದಾಟಿ ಬರಲು ಪ್ರಾರಂಭಿಸಿದ್ದ.
ಎಚ್ಚೆತ್ತ ಬಿಎಸ್‌ಎಫ್ ಪಡೆ ಒಳನುಗ್ಗುವವನನ್ನು ಗುಂಡಿಕ್ಕಿ ಹತ್ಯೆ ಮಾಡಿದ್ದು, ಆತನ ಗುರುತು ಪತ್ತೆಯಾಗಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.
ಪಂಜಾಬ್‌ನ 553 ಕಿ.ಮೀ. ವ್ಯಾಪ್ತಿಯನ್ನು ಒಳಗೊಂಡಂತೆ ಭಾರತ-ಪಾಕಿಸ್ತಾನ ಅಂತರರಾಷ್ಟ್ರೀಯ ಗಡಿಯನ್ನು ಬಿಎಸ್‌ಎಫ್ ಕಾವಲು ಕಾಯುತ್ತಿದೆ.