ಪಂಜಾಬ್‌ನ ಅಂತಾರಾಷ್ಟ್ರೀಯ ಗಡಿಯಲ್ಲಿ ಪಾಕಿಸ್ತಾನದ ಡ್ರೋನ್ ಹೊಡೆದುರುಳಿಸಿದ ಬಿಎಸ್‌ಎಫ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಶುಕ್ರವಾರ ಮುಂಜಾನೆ ಪಾಕಿಸ್ತಾನದ ಕಡೆಯಿಂದ ಅಂತಾರಾಷ್ಟ್ರೀಯ ಗಡಿ ಪಂಜಾಬ್‌ನ ಗುರುದಾಸ್‌ಪುರ ಸೆಕ್ಟರ್‌ನಲ್ಲಿ ಭಾರತವನ್ನು ಪ್ರವೇಶಿಸಿದ ಡ್ರೋನ್ ಅನ್ನು ಗಡಿ ಭದ್ರತಾ ಪಡೆ (ಬಿಎಸ್‌ಎಫ್) ಹೊಡೆದುರುಳಿಸಿದವು. ಗಸ್ತು ಕರ್ತವ್ಯದಲ್ಲಿದ್ದ ಬಿಎಸ್‌ಎಫ್ ಪಡೆ ಮುಂಜಾನೆ 4.35 ಕ್ಕೆ ಡ್ರೋನ್ ಅನ್ನು ಗುರುತಿಸಿ ಗುಂಡು ಹಾರಿಸಿ ಹೊಡೆದುರುಳಿಸಿದರು ಎಂದು ಹಿರಿಯ ಬಿಎಸ್‌ಎಫ್ ಅಧಿಕಾರಿ ತಿಳಿಸಿದ್ದಾರೆ.

ಈ ಪ್ರದೇಶದಲ್ಲಿ ಡ್ರೋನ್ ಯಾವುದಾದರೂ ಸರಕುಗಳನ್ನು ಬೀಳಿಸಿದೆಯೇ ಎಂಬುದನ್ನು ತಿಳಿಯಲು ಪ್ರದೇಶದಲ್ಲಿ ಬೃಹತ್ ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಲಾಗಿದೆ. ಬಿಎಸ್‌ಎಫ್ ಡಿಐಜಿ ನೇತೃತ್ವದಲ್ಲಿ ಶೋಧ ಕಾರ್ಯಾಚರಣೆ ನಡೆಯುತ್ತಿದ್ದು, ಡ್ರೋನ್‌ನಲ್ಲಿ ಪಾಕಿಸ್ತಾನದಿಂದ ಸರಕು ಸಾಗಣೆಯಾಗುತ್ತಿರುವ ಶಂಕೆ ವ್ಯಕ್ತವಾಗಿದೆ.

ಭಾರತವನ್ನು ಪ್ರವೇಶಿಸಿದ ಕೂಡಲೇ ಯೋಧರು ಡ್ರೋನ್‌ ಮೇಲೆ 17 ಸುತ್ತು ಗುಂಡುಗಳನ್ನು ಹಾರಿಸಿದರು. ಡ್ರೋನ್‌ನ ಒಂದು ಬ್ಲೇಡ್‌ಗೆ ಹಾನಿಯಾಗಿದೆ. ಕಳೆದ ಒಂಬತ್ತು ತಿಂಗಳುಗಳಲ್ಲಿ, ನೆರೆಯ ಪಾಕಿಸ್ತಾನದಿಂದ ಭಾರತದ ಭೂಪ್ರದೇಶಕ್ಕೆ 191 ಡ್ರೋನ್‌ಗಳ ಅಕ್ರಮ ಪ್ರವೇಶವನ್ನು ಭದ್ರತಾ ಪಡೆಗಳು ತಿಳಿಸಿವೆ, ಇದು ದೇಶದ ಆಂತರಿಕ ಭದ್ರತೆಯ ವಿಷಯದಲ್ಲಿ ಪ್ರಮುಖ ಕಳವಳವನ್ನು ಹುಟ್ಟುಹಾಕಿದೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!