ಬಜೆಟ್ 2022: ಸಾಂಕ್ರಾಮಿಕದಿಂದ ತಗ್ಗಿರುವ ಆರ್ಥಿಕತೆಗೆ ಉತ್ತೇಜನ ನೀಡಲಿದ್ಯಾ ಬಜೆಟ್?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕೋವಿಡ್ ಮೂರನೇ ಅಲೆ ನಡುವೆಯೇ ಇಂದು ಕೇಂದ್ರ ಬಜೆಟ್ ಮಂಡನೆಯಾಗುತ್ತಿದೆ.
ಕೊರೋನಾದಿಂದಾಗಿ ಹಲವು ಉದ್ಯಮಗಳು ಸಂಕಷ್ಟದಲ್ಲಿವೆ. ಈ ಎಲ್ಲ ಉದ್ಯಮಗಳು ಇಂದಿನ ಬಜೆಟ್‌ಗಾಗಿ ಎದುರು ನೋಡುತ್ತಿವೆ.
ಸಾಂಕ್ರಾಮಿಕದಿಂದ ತಗ್ಗಿರುವ ಆರ್ಥಿಕತೆಗೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಲಿರುವ ಬಜೆಟ್ ಉತ್ತೇಜನ ನೀಡುತ್ತದೆಯಾ ಕಾದು ನೋಡಬೇಕಿದೆ.
ಇಂದು ಬೆಳಗ್ಗೆ 11 ಗಂಟೆಗೆ ಸಂಸತ್ ಅಧಿವೇಶನದಲ್ಲಿ ಬಜೆಟ್ ಮಂಡನೆ ಆಗಲಿದೆ. ನಿರ್ಮಲಾ ಸೀತಾರಾಮನ್ ಅವರು ನಾಲ್ಕನೇ ಬಾರಿಗೆ ಬಜೆಟ್ ಮಂಡಿಸುತ್ತಿದ್ದಾರೆ. ಕಳೆದ ವರ್ಷ ಮೊದಲ ಬಾರಿಗೆ ಕಾಗದ ರಹಿತ ಬಜೆಟ್ ಮಂಡನೆಯಾಗಿದ್ದು, ಈ ಬಾರಿಯೂ ಪೇಪರ್‌ಲೆಸ್ ಬಜೆಟ್ ಮಂಡನೆಯಾಗಲಿದೆ.
ಅಂದಾಜು 90-120  ನಿಮಿಷಗಳ ಕಾಲ ಬಜೆಟ್ ಮಂಡನೆ ಆಗಲಿದೆ.
ಮಹಾಮಾರಿಯಿಂದ ಎಷ್ಟೋ ಕ್ಷೇತ್ರಗಳು ತತ್ತರಿಸಿವೆ. ಕೈಗಾರಿಕೆ, ಕೃಷಿ, ಬ್ಯಾಂಕಿಂಗ್, ಸೇವಾ ವಲಯ ಸೇರಿದಂತೆ ಜನರೂ ಬಜೆಟ್‌ಗಾಗಿ ಎದುರು ನೋಡುತ್ತಿದ್ದಾರೆ. ಇನ್ನೇನು ಸ್ವಲ್ಪವೇ ಸಮಯದಲ್ಲಿ ಎಲ್ಲದಕ್ಕೂ ಉತ್ತರ ಸಿಗಲಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!