ಬಜೆಟ್​ ಅಧಿವೇಶನ:ಲೋಕಸಭೆ 45 ಗಂಟೆ, ರಾಜ್ಯಸಭೆ 31 ಗಂಟೆ ಕಾರ್ಯ ನಿರ್ವಹಣೆ!

ಹೊಸದಿಗಂತ ಡಿಜಿಟಲ್‌ ಡೆಸ್ಕ್: 

ವಿಪಕ್ಷಗಳ ಪ್ರತಿಭಟನೆ, ಸದನ ಮೂಂದೂಡುವಿಕೆಯಿಂದ ನಿಗದಿತ ಅವಧಿಗಿಂತ ಮುನ್ನವೇ ಸಂಸತ್​ ಅಧಿವೇಶನ 133.6 ಘಂಟೆಗಳ ಸಮಯದಲ್ಲಿ 45 ಗಂಟೆ ಕಾಲ ಕಾರ್ಯ ನಿರ್ವಹಿಸಿದೆ.ರಾಜ್ಯಸಭೆಗೆ 130 ಗಂಟೆಗಳ ಪೈಕಿ 31 ಗಂಟೆ ಕಾರ್ಯ ನಿರ್ವಹಿಸಿದೆ ಎಂದು ವರದಿ ಹೇಳಿದೆ.

ಲೋಕಸಭೆ ನಿಗದಿಯಾದ ಸಮಯದಲ್ಲಿ ಶೇ.34.28 ರಷ್ಟು, ರಾಜ್ಯಸಭೆ ಶೇ.24 ರಷ್ಟು ಖಾರ್ಯ ನಿರ್ವಹಿಸಿದೆ. ಪ್ರಶ್ನೋತರ ವೇಳೆಯಲ್ಲು ಉಭಯ ಸದನದಲ್ಲಿ ಗದ್ದಲ ಉಂಟಾದ ಕಾರಣ ಕಲಾಪವನ್ನು ಮುಂದೂಡಲಾಗಿತ್ತು. ಇಡೀ ಬಜೆಟ್​ ಅಧಿವೇಶನದಲ್ಲಿ ಲೋಕಸಭೆಯಲ್ಲಿ 4.32 ಗಂಟೆ , ರಾಜ್ಯಸಭೆಯಲ್ಲಿ 1.32 ಗಂಟೆ ಪ್ರಶ್ನೆಗಳನ್ನು ಕೇಳಲಾಗಿದೆ.

ಹಾಲಿ ಲೋಕಸಭೆ ಅಧಿವೇಶನದಲ್ಲಿ ಬಜೆಟ್​ ಮೇಲೆ 14.42 ಗಂಟೆ ಗಳ ಕಾಲ ಚರ್ಚೆ ನಡೆದಿದ್ದು ಇದರಲ್ಲಿ 145 ಸದಸ್ಯರು ಭಾಗಿಯಾಗಿದ್ದರು. ರಾಷ್ಟ್ರಪತಿ ಅವರ ಭಾಷಣದ ಮೇಲಿನ ವಂದನಾ ನಿರ್ಣಯ ಕುರಿತ ಚರ್ಚೆಯನ್ನು 13.44 ಗಂಟೆಗಳ ಕಾಲ ನಡೆಸಲಾಗಿದೆ. ಲೋಕಸಭೆ ಅಧಿವೇಶನದಲ್ಲಿ 8 ಮಸೂದೆಗಳನ್ನು ಮಂಡಿಲಾಗಿದ್ದು ಇದರಲ್ಲಿ 6 ಅನ್ನು ಅಂಗೀಕರಿಸಲಾಗಿದೆ. ಇದರಲ್ಲಿ 29 ಪ್ರಶ್ನೆಗಳನ್ನು ಉತ್ತರಿಸಲಾಗಿದೆ ಎಂದು ಲೋಕಸಭೆ ಸ್ಪೀಕರ್​ ಓಂ ಬಿರ್ಲಾ ತಿಳಿಸಿದ್ಧಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!