ದೆಹಲಿ ಅಬಕಾರಿ ನೀತಿ ಹಗರಣ: ಇಡಿ ಸಲ್ಲಿಸಿದ ಚಾರ್ಜ್ ಸೀಟ್ ನಲ್ಲಿ ಸಿಸೋಡಿಯಾ, ಕವಿತಾ ಹೆಸರಿಲ್ಲ!

ಹೊಸದಿಗಂತ ಡಿಜಿಟಲ್‌ ಡೆಸ್ಕ್: 

ದೆಹಲಿ ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ(ಇಡಿ) ಗುರುವಾರ ಮೂರನೇ ಚಾರ್ಜ್ ಸೀಟ್ ಸಲ್ಲಿಸಿದ್ದಾರೆ.
ಆದ್ರೆಇದ್ರಲ್ಲಿ ದೆಹಲಿ ಮಾಜಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಹಾಗೂ ಬಿಎಸ್ ಆರ್ ನಾಯಕಿ ಕವಿತಾ ಅವರನ್ನು ಹೆಸರನ್ನು ಉಲ್ಲೇಖಿಸಿಲ್ಲ.

‘ಮದ್ಯ ಲಾಬಿ’ಯ ಪರವಾದ ನೀತಿಗಾಗಿ ವಿವಿಧ ಮಧ್ಯವರ್ತಿಗಳಿಂದ ಹಣ ಪಡೆದು ಅದನ್ನು ಸರ್ಕಾರಿ ಅಧಿಕಾರಿಗಳು ಮತ್ತು ರಾಜಕಾರಣಿಗಳಿಗೆ ವಿಶೇಷವಾಗಿ ಎಎಪಿ ನಾಯಕರಿಗೆ ಲಂಚ ನೀಡಲಾಗಿದೆ ಎಂದು ಆರೋಪಿಸಲಾಗಿದೆ.ಆದ್ರೆ ಇಂದು ಇಡಿ ಸಲ್ಲಿಸಿದ ಚಾರ್ಜ್ ಶೀಟ್ ನಲ್ಲಿ ದೆಹಲಿ ಮಾಜಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಮತ್ತು ಬಿಆರ್ಎಸ್ ನಾಯಕಿ ಕೆ.ಕವಿತಾ ಅವರ ಹೆಸರಿಲ್ಲ.

ರೋಸ್ ಅವೆನ್ಯೂ ನ್ಯಾಯಾಲಯದ ಆವರಣದಲ್ಲಿರುವ ವಿಶೇಷ ನ್ಯಾಯಾಧೀಶ ಎಂ.ಕೆ.ನಾಗ್ಪಾಲ್ ಅವರಿಗೆ ಇಡಿ ಸಲ್ಲಿಸಿದ ಚಾರ್ಜ್ ಶೀಟ್ ನಲ್ಲಿ ವೈಎಸ್ಆರ್ ಕಾಂಗ್ರೆಸ್ ಸಂಸದ ಮಾಗುಂಟ ಶ್ರೀನಿವಾಸುಲು ರೆಡ್ಡಿ ಅವರ ಪುತ್ರ ರಾಘವ್ ಮಾಗುಂಟ, ಗೌತಮ್ ಮಲ್ಹೋತ್ರಾ ಮತ್ತು ರಾಜೇಶ್ ಜೋಶಿ ಅವರನ್ನು ಹೆಸರಿಸಲಾಗಿದೆ. ಫೆಬ್ರವರಿ 7 ರಂದು ಮಲ್ಹೋಟಾ, ಫೆಬ್ರವರಿ 8 ರಂದು ಜೋಶಿ ಮತ್ತು ಫೆಬ್ರವರಿ 10 ರಂದು ಮಾಗುಂಟಾ ಅವರನ್ನು ಬಂಧಿಸಲಾಗಿದೆ ಎಂದು ಇಡಿ ನ್ಯಾಯಾಲಯಕ್ಕೆ ಮಾಹಿತಿ ನೀಡಿದೆ.

ನ್ಯಾಯಾಲಯವು ಏಪ್ರಿಲ್ 14 ರಂದು ಈ ಪ್ರಕರಣದ ವಿಚಾರಣೆ ನಡೆಸಲಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!