Saturday, October 1, 2022

Latest Posts

ಬೈಕ್ ಡಿಕ್ಕಿ ಹೊಡೆದು ಸ್ಥಳದಲ್ಲೇ ಎಮ್ಮೆ ಸಾವು: ಮಗು ಸಹಿತ ನಾಲ್ವರಿಗೆ ಗಾಯ

ಹೊಸದಿಗಂತ ವರದಿ,ಕಲಬುರಗಿ:

ಜಿಲ್ಲೆಯ ಅಫಜಲಪುರ ತಾಲೂಕಿನ ಬಂಕಲಗಾ ಗ್ರಾಮದ ಬಳಿ ಬುಲೆಟ್ ಬೈಕ್ ಒಂದು ಎಮ್ಮೆಗೆ ಡಿಕ್ಕಿ ಹೊಡೆದ ಪರಿಣಾಮ ಎಮ್ಮೆ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ನಡೆದಿದ್ದು, ಜೊತೆಗೆ ಮಗು ಸೇರಿದಂತೆ ನಾಲ್ವರು ಬೈಕ್ ಸವಾರರಿಗೆ ಗಾಯಗಳಾಗಿವೆ.

ತಾಯಿ ಮಹಾದೇವಿ ಮತ್ತು ನಾಲ್ಕು ವರ್ಷಗಳ ಮಗು ಸ್ಮೀತಾ ಸ್ಥಿತಿ ಚಿಂತಾಜನಕವಾಗಿದೆ. ಬೈಕ್ ಸವಾರ ದೇವಿಂದಪ್ಪಾ ಮತ್ತು ಬಸಮ್ಮಾಳಿಗೆ ಗಂಭೀರ ಗಾಯಗಳಾಗಿವೆ ಎಂದು ತಿಳಿದುಬಂದಿದೆ.

ಗೊಬ್ಬುರ ಕೆ ಗ್ರಾಮದಿಂದ ಬುಲೆಟ್ ಬೈಕ್ ಮೇಲೆ ಮಹಾರಾಷ್ಟ್ರ ಕ್ಕೆ ತೆರಳುತ್ತಿದ್ದರು. ಪುನಃ ಮಹಾರಾಷ್ಟ್ರ ದಿಂದ ಮರಳಿ ಬರುವಾಗ ಬಂಕಲಗಾ ಬಳಿ ಎಮ್ಮೆಗೆ ಡಿಕ್ಕಿ ಹೊಡೆದ ಘಟನೆ ನಡೆದಿದೆ.
ಬುಲೆಟ್ ಬೈಕ್, ನ ಡಿಕ್ಕಿ ರಭಸಕ್ಕೆ ಎಮ್ಮೆ ಸ್ಥಳದಲ್ಲೇ ಮೃತಪಟ್ಟಿದ್ದು,ಗಾಯಾಳುಗಳನ್ನು ಕಲಬುರಗಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ.

ಅಫಜಲಪುರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!