ಗುರುಗಳ ಆಶೀರ್ವಾದ, ಪ್ರೇರಣೆಯಿಂದ ಹೊಸ ಭಾರತ ನಿರ್ಮಾಣ: ಗುರು ಪುರಬ್ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಗುರು ನಾನಕ್ ಜಯಂತಿ ಹಿನ್ನಲೆಯಲ್ಲಿ ದೆಹಲಿಯಲ್ಲಿ ಆಯೋಜಿಸಿದ ಗುರು ಪುರಬ್ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಭಾಗವಹಿಸಿದರು.

ಈ ವೇಳೆ ಮಾತನಾಡಿದ ಅವರು, ಬಿಜೆಪಿ ಕಾರ್ಯಕರ್ತನಾಗಿ ನಾನು ಪಂಜಾಬ್‌ನಲ್ಲಿ ಹೆಚ್ಚು ಕಾಲ ಕಳೆದಿದ್ದೇನೆ. ಈ ವೇಳೆ ಸಿಖ್ ಗುರು ಮಂದಿರಕ್ಕೇ ಭೇಟಿ ನೀಡುವ ಸಿಖರ್ ಜೊತೆ ಕೆಲಸ ಮಾಡುವ ಅವಕಾಶ ಸಿಕ್ಕಿದೆ. ಪ್ರಧಾನಿಯಾಗಿ ಗುರು ಗೋವಿಂದ್ ಜಿ, ಗೋರ್ ತೇಗ್ ಬಹದ್ದೂರ್ ಜಿ ಸೇರಿದಂತೆ ಪವಿತ್ರ ಸಿಖ್ ಗುರುಗಳ ಜಯಂತಿ ಆಚರಿಸುವ ಸೌಭಾಗ್ಯ ಒಲಿದು ಬಂದಿತ್ತು. ಗುರುಗಳ ಆಶೀರ್ವಾದ, ಪ್ರೇರಣೆಯಿಂದ ಹೊಸ ಭಾರತ ನಿರ್ಮಾಣವಾಗುತ್ತಿದೆ. ಸಿಖ್ ಪರಂಪರೆಯ ಮಹತ್ವ ಹಾಗೂ ಸೇವಾ ಮನೋಭವಾನೆ ದೇಶಕ್ಕೆ ಮತ್ತಷ್ಟು ಪ್ರೇರಣೆ ಸಿಕ್ಕಿದೆ ಎಂದು ಹೇಳಿದ್ದಾರೆ.

ಎಲ್ಲಾ ಗುರುಗಳ ಚರಣಕ್ಕೆ ನಮನ ಸಲ್ಲಿಸುತ್ತೇನೆ. ಈಶ್ವರ ನಾಮ ಜಪ ಮಾಡಿ, ನಿಮ್ಮ ಕರ್ತವ್ಯದಲ್ಲಿ ಸಾಗಿ, ಕಠಿಣ ಪ್ರಯತ್ನ ಮಾಡಿದರೆ ಫಲ ಸಿಗಲಿದೆ ಅನ್ನೋ ಗುರು ನಾನಕ್ ಮಾತನ್ನು ಇಲ್ಲಿ ಸ್ಮರಿಸುತ್ತೇನೆ. ಭಾರತೀಯ ಜೀವನ ಕಲ್ಯಾಣಕ್ಕೆ ಗುರು ನಾನಕ್ ನೀಡಿದ ಸಂದೇಶ ಮಹತ್ವದ್ದಾಗಿದೆ. ಅಮೃತ ಮಹೋತ್ಸವದ ಈ ಸಂದರ್ಭದಲ್ಲಿ ನಮ್ಮ ದೇಶದ ಗುರುಗಳನ್ನು ಸ್ಮರಿಸಿ, ಅವರ ಮಾರ್ಗದರ್ಶನ ಹಾಗೂ ಪ್ರೇರಣೆ ಪಡೆಯುವುದು ಅತೀವ ಮುಖ್ಯವಾಗಿದೆ ಮೋದಿ ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!