ಹೊಸದಿಗಂತ ಡಿಜಿಟಲ್ ಡೆಸ್ಕ್:
ಪ್ಯಾರೀಸ್ನ ಕಟ್ಟಡವೊಂದರಲ್ಲಿ ಭಾರೀ ಸ್ಫೋಟ ಸಂಭವಿಸಿದ್ದು, ಕಟ್ಟಡ ಕುಸಿದು ಬಿದ್ದು ಭಾರೀ ಅನಾಹುತ ನಡೆದಿದೆ. ಸ್ಫೋಟದಿಂದಾಗಿ 30ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಏಳು ಮಂದಿಯ ಸ್ಥಿತಿ ಗಂಭೀರವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.
ಐತಿಹಾಸಿಕ ಆಸ್ಪತ್ರೆ ವಾಲ್ ಡಿ ಗ್ರೇಸ್ ಮಿಲಿಟರಿ ಬಳಿ ಸ್ಫೋಟ ಸಂಭವಿಸಿದ್ದು, ಅರೋಂಡಿಸ್ಮೆಂಟ್ನ ಕಟ್ಟಡದ ಮುಂಭಾಗ ಕುಸಿದುಬಿದ್ದಿದೆ. ಈ ಹಿಂದೆಯೂ ಇದೇ ಸ್ಥಳದಲ್ಲಿ ಸ್ಫೋಟ ಸಂಭವಿಸಿತ್ತು. ಇದೀಗ ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗಿದ್ದು, ಸಾವು ನೋವುಗಳು ವರದಿಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ.