ಹೊಸದಿಗಂತ ಡಿಜಿಟಲ್ ಡೆಸ್ಕ್:
ಹೊಸೂರು ಬಳಿಯ ಮಲ್ಲಿಕಾರ್ಜುನ ದುರ್ಗಂ ಗ್ರಾಮದ ಬಳಿ ಜಲ್ಲಿಕಟ್ಟು ಸ್ಪರ್ಧೆ ವೇಳೆ ಭಾರೀ ಅವಘಡ ಸಂಭವಿಸಿದೆ.
ಗೂಳಿಗಳು ಜಲ್ಲಿಕಟ್ಟು ಸ್ಪರ್ಧೆ ವೇಳೆ ಏಕಾಏಕಿ ದಾಳಿ ಮಾಡಿದ್ದು, ಇದರಿಂದ 30ಕ್ಕೂ ಅಧಿಕ ಮಂದಿಗೆ ಗಂಭೀರ ಗಾಯಗಳಾಗಿವೆ. ಹಬ್ಬದ ಸಂಭ್ರಮದಲ್ಲಿದ್ದವರು ಈಗ ಆಸ್ಪತ್ರೆಯಲ್ಲಿ ನರಳಾಡುವ ಪರಿಸ್ಥಿತಿ ಎದುರಾಗಿದೆ.
ಈ ರೀತಿ ಅಪಾಯಕಾರಿ ಕ್ರೀಡೆ ಜಲ್ಲಿಕಟ್ಟು ಸ್ಪರ್ಧೆ ರಾಜ್ಯದಲ್ಲಿ ಬ್ಯಾನ್ ಆಗಿದೆ. ಆದರೂ ತಮಿಳುನಾಡಿನಲ್ಲಿ ಮಾತ್ರ ಈ ಸ್ಪರ್ಧೆಯನ್ನ ಸಾಹಸ ಕ್ರೀಡೆಯಾಗಿ ನಡೆಸುತ್ತಾರೆ. ಈ ಕ್ರೀಡೆ ನೋಡಲು ಸಾವಿರಾರು ಮಂದಿ ಸೇರುತ್ತಾರೆ.