ಹೊಸದಿಗಂತ ಡಿಜಿಟಲ್ ಡೆಸ್ಕ್:
ದೀಪಾವಳಿ ಹಬ್ಬದ ಸಮಯದಲ್ಲಿ ಕೆಎಸ್‌ಆರ್‌ಟಿಸಿ (KSRTC) ಬಂಪರ್ ಆದಾಯಗಳಿಸಿದ್ದು, ಸಾಲು ಸಾಲು ರಜೆಗಳಿದ್ದ ಕಾರಣ ಊರಿನತ್ತ ತೆರಳಿದ್ದವರು ನ.03 ರಂದು ಭಾನುವಾರ ಮತ್ತೆ ಸಿಲಿಕಾನ್ ಸಿಟಿಗೆ ಮರಳಿದ್ದಾರೆ. ಇದರಿಂದಾಗಿ ಭಾನುವಾರ ಒಂದೇ ದಿನ ಆನ್‌ಲೈನ್‌ಲ್ಲಿ 85,462 ಸೀಟುಗಳನ್ನು ಬುಕಿಂಗ್ ಆಗಿದ್ದವು.
85,462 ಸೀಟುಗಳು ಬುಕ್ ಆಗಿದ್ದು, ಒಂದೇ ದಿನದಲ್ಲಿ ಬರೋಬ್ಬರಿ 5.59 ಕೋಟಿ ರೂ. ಆದಾಯವನ್ನು ಕೆಎಸ್‌ಆರ್‌ಟಿಸಿ ಗಳಿಸಿದೆ. ಇದಕ್ಕೂ ಮೊದಲು ಅಕ್ಟೋಬರ್ ಅಂತ್ಯದ ದಿನವೊಂದರಲ್ಲಿ 67,033 ಟಿಕೆಟ್ ಮಾರಾಟವಾಗಿದ್ದವು.