September 13, 2026
Sunday, September 13, 2026
spot_img

ಬೆಳ್ಳಿ, ಚಿನ್ನದ ಬೆಲೆಯಲ್ಲಿ ಬಂಪರ್ ಏರಿಕೆ: ಇಂದಿನ ಮಾರ್ಕೆಟ್ ದರ ಪಟ್ಟಿ ಹೀಗಿದೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕಳೆದ ಕೆಲವು ದಿನಗಳಿಂದ ಸತತವಾಗಿ ಏರಿಕೆಯಾಗುತ್ತಿರುವ ಬಂಗಾರದ ಮೌಲ್ಯದಲ್ಲಿ ಇಂದು ಮತ್ತೆ ದೊಡ್ಡ ಪ್ರಮಾಣದ ಜಿಗಿತ ಕಂಡುಬಂದಿದೆ. ಬುಧವಾರದ ವಹಿವಾಟಿನಲ್ಲಿ ಪ್ರತಿ ಗ್ರಾಮ್ ಚಿನ್ನದ ದರ 200 ರೂಪಾಯಿಗಿಂತಲೂ ಅಧಿಕ ಹೆಚ್ಚಾಗಿದೆ. 18 ಕ್ಯಾರಟ್‌ನ ಶುದ್ಧತೆಯ ಆಭರಣ ಚಿನ್ನದ ಮೌಲ್ಯವು ಪ್ರಸ್ತುತ 11,000 ರೂಪಾಯಿಗಳ ಸಮೀಪಕ್ಕೆ ತಲುಪಿದೆ. ಜಾಗತಿಕ ಮಾರುಕಟ್ಟೆಯಲ್ಲೂ ಹಳದಿ ಲೋಹದ ಬೆಲೆ ಗಣನೀಯವಾಗಿ ಹೆಚ್ಚಾಗಿದೆ.

ಇಂದಿನ 22 ಮತ್ತು 24 ಕ್ಯಾರಟ್ ಚಿನ್ನದ ದರ

ದೇಶೀಯ ಮಾರುಕಟ್ಟೆಯಲ್ಲಿ 10 ಗ್ರಾಮ್ ತೂಕದ 22 ಕ್ಯಾರಟ್ ಚಿನ್ನದ ಬೆಲೆ 1,34,300 ರೂಪಾಯಿಗೆ ತಲುಪಿದ್ದರೆ, ಅತ್ಯಂತ ಶುದ್ಧವಾದ 24 ಕ್ಯಾರಟ್‌ನ 10 ಗ್ರಾಮ್ ಅಪರಂಜಿ ಚಿನ್ನದ ಮೌಲ್ಯ 1,46,510 ರೂಪಾಯಿಗಳಿಗೆ ಏರಿಕೆಯಾಗಿದೆ.

ಬೆಳ್ಳಿ ಬೆಲೆಯಲ್ಲೂ ಭಾರಿ ಜಿಗಿತ

ಚಿನ್ನದ ಜೊತೆಗೆ ಬೆಳ್ಳಿಯ ಮೌಲ್ಯದಲ್ಲೂ ಇಂದು ಏರಿಕೆ ದಾಖಲಾಗಿದೆ. ಪ್ರತಿ ಗ್ರಾಮ್ ಬೆಳ್ಳಿಯ ದರದಲ್ಲಿ 5 ರೂಪಾಯಿ ಹೆಚ್ಚಳವಾಗಿದೆ. ಪ್ರಸ್ತುತ 100 ಗ್ರಾಮ್ ಬೆಳ್ಳಿಯ ಬೆಲೆ 24,000 ರೂಪಾಯಿ ತಲುಪಿದೆ.

ಪ್ರಮುಖ ನಗರಗಳಲ್ಲಿ ಇಂದಿನ ದರ ಹೀಗಿದೆ

ರಾಜಧಾನಿ ಬೆಂಗಳೂರಿನಲ್ಲಿ 10 ಗ್ರಾಮ್ ಆಭರಣ ಚಿನ್ನದ ಬೆಲೆ 1,34,300 ರೂಪಾಯಿ ಹಾಗೂ 100 ಗ್ರಾಮ್ ಬೆಳ್ಳಿಯ ದರ 24,000 ರೂಪಾಯಿಯಷ್ಟಿದೆ. ಇನ್ನು ತಮಿಳುನಾಡು ಮತ್ತು ಕೇರಳದಂತಹ ನೆರೆರಾಜ್ಯಗಳಲ್ಲಿ 100 ಗ್ರಾಮ್ ಬೆಳ್ಳಿಯ ಬೆಲೆ 24,500 ರೂಪಾಯಿಗಳಿಗೆ ಮಾರಾಟವಾಗುತ್ತಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !