ವಾಷಿಂಗ್ಟನ್‌ನಲ್ಲಿ ಹೆಚ್ಚುತ್ತಿದೆ ಕಳ್ಳತನ: ಭಾರತೀಯರ ಮನೆಗಳೇ ಟಾರ್ಗೆಟ್?

ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಮೆರಿಕದ ವಾಷಿಂಗ್ಟನ್‌ನಲ್ಲಿ ಕಳವು ಕೃತ್ಯ ಹೆಚ್ಚಳವಾಗುತ್ತಿದ್ದು, ಇಲ್ಲಿ ಭಾರತೀಯ ನಿವಾಸಿಗಳ ಮನೆಗಳನ್ನೇ ಗುರಿಯಾಗಿಸಿ ಕಳವು ಕೃತ್ಯಗಳು ನಡೆಯುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ.
ಕಳೆದ ಎರಡು ವಾರಗಳಿಂದ ಕಳ್ಳತನ ಪ್ರಕರಣಗಳು ಹೆಚ್ಚಳವಾಗುತ್ತಿದೆ. ಕಳ್ಳರು ಸಂಘಟಿತವಾಗಿ ಭಾರತೀಯ ಅಮೆರಿಕನ್ನರ ಮನೆಗಳನ್ನೇ ಗುರಿಯಾಗಿಸುತ್ತಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳೂ ವರದಿ ಮಾಡಿವೆ.
ಕಳ್ಳರನ್ನು ಪತ್ತೆ ಹಚ್ಚಲು ಸ್ಥಳೀಯ ನಿವಾಸಿಗಳು ರಣತಂತ್ರ ರೂಪಿಸಿದ್ದಾರೆ. ಶಂಕಿತರ ಚಲನವಲನಗಳ ಮೇಲೆ ನಿಗಾ ಇಡುತ್ತಿದ್ದಾರೆ. ಇವರ ನೆರವಿಗೆ ಪೊಲೀಸರೂ ಬಂದಿದ್ದು, ಕೃತ್ಯಗಳು ನಡೆದ ಪರಿಸರದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದಾರೆ ಎಂದು ಅಲ್ಲಿನ ಸ್ಥಳೀಯರೊಬ್ಬರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.
ಹೆಚ್ಚಿನ ಭಾರತೀಯ ಅಮೆರಿಕನ್ನರ ಬಳಿ ನಾಗರಿಕತ್ವ ಇಲ್ಲ. ಹೀಗಾಗಿ ಅವರಿಗೆ ಶಸ್ತ್ರಾಸ್ತ್ರ ಹೊಂದಲು ಅವಕಾಶವಿಲ್ಲ. ಇದನ್ನು ಅರಿತು ಕಳ್ಳರು ಟಾರ್ಗೆಟ್ ಮಾಡುತ್ತಿದ್ದಾರೆಯೇ ಎಂಬ ಅನುಮಾನವೂ ಈಗ ಪೊಲೀಸರನ್ನು ಕಾಡುತ್ತಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!