ಪ್ರಾಣಪ್ರತಿಷ್ಟೆಗೆ ದಿನಗಣನೆ: ರಾಮಾಯಣದ ಚಿತ್ರಣದಂತೆಯೇ ಸಜ್ಜಾಗುತ್ತಿದೆ ಅಯೋಧ್ಯಾ ನಗರಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಯೋಧ್ಯೆಯ ಭವ್ಯ ಶ್ರೀರಾಮ ಮಂದಿರದಲ್ಲಿ ರಾಮಲಲ್ಲಾನ ಪ್ರಾಣಪ್ರತಿಷ್ಟೆಗೆ ದಿನಗಣನೆ ಆರಂಭವಾಗುತ್ತಿರುವ ಬೆನ್ನಿಗೇ ಈಗ ಅಯೋಧ್ಯಾ ನಗರಿಯಲ್ಲಿ ಸಿದ್ಧತೆಗಳು ಇನ್ನಷ್ಟು ಭರದಿಂದ ಸಾಗುತ್ತಿವೆ. ಅಯೋಧ್ಯೆಯನ್ನು ರಾಮಾಯಣದ ಕತೆಯಲ್ಲಿ ಬರುವ ಚಿತ್ರಣದಂತೆಯೇ ಇಲ್ಲಿ ಸಜ್ಜುಗೊಳಿಸಲಾಗುತ್ತಿದೆ.
ಈಗ ಆಯೋಧ್ಯೆಗೆ ಅಯೋಧ್ಯೆಯೇ ಸಿಂಗಾರದಲ್ಲಿ ತೊಡಗಿಕೊಂಡಿದ್ದು, ಹಗಲು ಇರುಳೆನ್ನದೆ ಸಹಸ್ರಾರು ಭಕ್ತರು ಇಲ್ಲಿನ ಕೆಲಸಕಾರ್ಯಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ.
ರಾಮಾಯಣ ಕಾಲದ ಬಹುದೊಡ್ಡ ಸಾಕ್ಷಿ ರಾಮ್ ಕೀ ಪೌರಿಯನ್ನು ಸುಂದರವಾಗಿ ಅಲಂಕರಿಸಲಾಗುತ್ತಿದೆ. ಈ ಜಾಗದ ಐತಿಹಾಸಿಕ ಮಹತ್ವವನ್ನು ಶ್ರೀರಾಮ ಭಕ್ತರಿಗೆ ತಿಳಿಸಲು ಎಲ್ಲ ರೀತಿಯ ಸಿದ್ಧತೆಗಳೂ ಶುರುವಾಗಿವೆ. ರಾಮನ ಮೆಟ್ಟಿಲಿನ ಪಕ್ಕದಲ್ಲಿರುವ ನಾಥ ನಾಗೇಶ್ವರ ಮಂದಿರ, ಚಂದ್ರ ಹರಿ ಮಂದಿರ, ವಿಷ್ಣು ಹರಿ ಮಂದಿರ ಮತ್ತು ಸರಯೂ ಮಂದಿರ ಇದ್ದು, ಇವುಗಳೂ ಶೃಂಗಾರಗೊಳ್ಳುತ್ತಿವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!