September 21, 2026
Monday, September 21, 2026
spot_img

ಇಟಲಿಯ ಶಾಲೆಗಳಲ್ಲಿಯೂ ಬುರ್ಖಾ ನಿಷೇಧ? ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ಮಹತ್ವದ ಹೇಳಿಕೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಇಟಲಿಯ ಶಾಲೆಗಳಲ್ಲಿ ಮುಖ ಕವರ್‌ ಆಗುವಂತಹ ನಿಖಾಬ್‌, ಬುರ್ಖಾವನ್ನು ನಿಷೇಧಿಸುವ ಕಾನೂನ್ನು ಜಾರಿ ಮಾಡುವುದಾಗಿ ಪ್ರಧಾನಿ ಜಾರ್ಕಿಯಾ ಮೆಲೋನಿ ಹೇಳಿದ್ದಾರೆ.

ಭಾನುವಾರ ರಾತ್ರಿ ರೋಮ್‌ನಲ್ಲಿ ನಡೆದ ಬ್ರದರ್ಸ್‌ ಆಫ್‌ ಇಟಲಿ ಕಾರ್ಯಕ್ರಮದಲ್ಲಿ ಮಾತನಾಡಿ, ವಿದೇಶಿ ವಿದ್ಯಾರ್ಥಿಗಳ ಸಂಖ್ಯೆಯನ್ನು ಮಿತಿಗೊಳಿಸುವ ಹಾಗೂ ಶಾಲೆಗಳಲ್ಲಿ ಇಟಾಲಿಯನ್‌ ಭಾಷೆ ಕಡ್ಡಾಯವಾಗಿ ಕಲಿಯುವ ನಿಯಮಗಳು ಈ ಕಾನೂನಲ್ಲಿ ಸೇರ್ಪಡೆಯಾಗಿರಲಿದೆ ಎಂದು ಹೇಳಿದ್ದಾರೆ. ಸಂಸತ್‌ನಲ್ಲಿ ಈ ವಿಷಯವನ್ನು ಮಂಡನೆ ಮಾಡುತ್ತೇವೆ. ತದನಂತರ ಸರ್ಕಾರ ಇದಕ್ಕೆ ಅನುಮೋದನೆ ನೀಡಿದರೆ ಎರಡು ತಿಂಗಳಿನೊಳಗೆ ಇದು ಕಾನೂನಾಗಿ ಜಾರಿಯಾಗಲಿದೆ.

ಒಂದು ತರಗತಿಯಲ್ಲಿ ವಿದೇಶಿ ವಿದ್ಯಾರ್ಥಿಗಳ ಸಂಖ್ಯೆ ಎಷ್ಟು ಎನ್ನುವುದು ಒಂದು ಸಂಖ್ಯೆಗೆ ಲಿಮಿಟ್‌ ಆಗಬೇಕು. ಇಟಲಿಯ ಶಾಲೆಗಳಿಗೆ ಮಕ್ಕಳನ್ನು ಸೇರಿಸುವ ಪೋಷಕರು, ತಮ್ಮ ಮಕ್ಕಳಿಗೆ ಇಟಲಿ ಭಾಷೆಯನ್ನು ಕಲಿಸಬೇಕು. ನಮ್ಮ ದೇಶಕ್ಕೆ ಬರುವಾಗ ಇಲ್ಲಿನ ಸಂಸ್ಕೃತಿ, ನಿಯಮಗಳನ್ನು ಪಾಲಿಸಿ, ಇಲ್ಲಿನ ಭಾಷೆಯನ್ನು ಅರಿತು ಕಲಿತರೆ ಅದು ನಮ್ಮ ದೇಶಕ್ಕೆ ನೀಡುವ ಬಹುದೊಡ್ಡ ಗೌರರವಾಗಿದೆ ಎಂದು ಹೇಳಿದ್ದಾರೆ.

ಇಟಲಿಗೆ ಬಂದು ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳುವ ಯಾರೇ ಆಗಲಿ ಇಟಲಿ ಭಾಷೆಯನ್ನು ಕಲಿಯಬೇಕು. ನಮ್ಮ ಸಂಪ್ರದಾಯ, ನಿಯಮವನ್ನು ಗೌರವಿಸುವ ಜನರಿಗೆ ದೇಶದ ಬಾಗಿಲು ತೆರೆದೇ ಇದೆ ಎಂದು ಹೇಳಿದ್ದಾರೆ. ಸಮಾನತೆ ಅನ್ನೋದನ್ನು ಬಾಯಲ್ಲಿ ಹೇಳಿದರೆ ಸಾಲದು. ಶಾಲೆಯಲ್ಲಿ ಮಕ್ಕಳು ತಮ್ಮ ಮುಖವನ್ನು ಮುಚ್ಚುವಂತಹ ಉಡುಗೆ ಹಾಕಬಾರದು. ಧರ್ಮದ ಹೆಸರಿನಲ್ಲಿ ಯಾರೂ ತಮ್ಮ ಮುಖವನ್ನು ಮರೆಮಾಡಿಕೊಳ್ಳುವಂತೆ ಆಗಬಾರದು. ನಮ್ಮ ದೇಶದಲ್ಲಿ ಲಿಂಗ ಸಮಾನತೆ ಎನ್ನುವ ವಿಚಾರದಲ್ಲಿ ಯಾವುದೇ ರಾಜಿ ಇಲ್ಲ ಎಂದು ಹೇಳಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !