Thursday, March 30, 2023

Latest Posts

ಕಣಿವೆಗೆ ಉರುಳಿದ 66 ವಲಸಿಗರಿದ್ದ ಬಸ್‌ : 39 ಮಂದಿ ಸಾವು

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

66 ವಲಸಿಗರನ್ನು ಹೊತ್ತೊಯ್ಯುತ್ತಿದ್ದ ಬಸ್ ಬೆಟ್ಟದ ಮೇಲಿಂದ ಕಣಿವೆಗೆ ಉರುಳಿದ್ದು, ಈ ಅಪಘಾತದಲ್ಲಿ 39 ಮಂದಿ ಸಾವನ್ನಪ್ಪಿದ್ದಾರೆ. ದುರಂತದಲ್ಲಿ 20 ಮಂದಿ ಗಾಯಗೊಂಡಿದ್ದಾರೆಂದು ಸ್ಥಳೀಯ ಪೊಲೀಸರು ತಿಳಿಸಿದ್ದಾರೆ. ಅಮೆರಿಕದ ಪಶ್ಚಿಮ ಪನಾಮದಲ್ಲಿ ಈ ದುರ್ಘಟನೆ ನಡೆದಿದ್ದು,  ಕೊಲಂಬಿಯಾದಿಂದ ಪನಾಮಕ್ಕೆ ಡೇರಿಯನ್ ಲೈನ್ ಅನ್ನು ದಾಟಿ ವಲಸಿಗರನ್ನು ಗೌಲಾಕಾ ನಿರಾಶ್ರಿತರ ಶಿಬಿರಕ್ಕೆ ಸಾಗಿಸುತ್ತಿದ್ದಾಗ ಅಪಘಾತ ಸಂಭವಿಸಿದೆ.

ಸರ್ಕಾರದ ಪರವಾಗಿ, ಪನಾಮಾ ಅಧ್ಯಕ್ಷ ಲೊರೆಂಜೊ ಕಾರ್ಟಿಜೊ ಅವರು ಅಪಘಾತದಲ್ಲಿ ಸಾವನ್ನಪ್ಪಿದವರ ಕುಟುಂಬಗಳಿಗೆ ಸಂತಾಪ ವ್ಯಕ್ತಪಡಿಸಿದ್ದಾರೆ. ಡಿವೈಡರ್‌ಗೆ ಡಿಕ್ಕಿ ಹೊಡೆದ ವೇಳೆ ಚಾಲಕ ಬಸ್ ಹೆದ್ದಾರಿಗೆ ಹಿಂತಿರುಗಿಸಲು ಪ್ರಯತ್ನಿಸಿದನು, ಆದರೆ ಇನ್ನೊಂದು ಬಸ್ ಅದಕ್ಕೆ ಡಿಕ್ಕಿ ಹೊಡೆದಿದ್ದರಿಂದ ಬಸ್ ಕಂದಕಕ್ಕೆ ಬಿದ್ದಿದೆ ಎಂದು ಲಾರೆಂಟಿಯೊ ಕಾರ್ಟಿಜೊ ಹೇಳಿದರು. ಕಳೆದ ಹತ್ತು ವರ್ಷಗಳಲ್ಲಿ ಪನಾಮದಲ್ಲಿ ವಲಸಿಗರು ಕಂಡ ಅತ್ಯಂತ ಭೀಕರ ಅಪಘಾತ ಇದಾಗಿದೆ ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ.

ಬಸ್‌ನಲ್ಲಿ 66 ಜನರು ಪ್ರಯಾಣಿಸುತ್ತಿದ್ದು, ಗಾಯಗೊಂಡವರಲ್ಲಿ ಐದಕ್ಕೂ ಹೆಚ್ಚು ಮಕ್ಕಳಿರುವುದಾಗಿ ಪನಾಮದ ಆರೋಗ್ಯ ಸಚಿವಾಲಯ ತಿಳಿಸಿದೆ. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!