Monday, October 2, 2023

Latest Posts

60ಕ್ಕೂ ಹೆಚ್ಚು ಶಬರಿಮಲೆ ಭಕ್ತರನ್ನು ಕೊಂಡೊಯ್ಯುತ್ತಿದ್ದ ಬಸ್‌ ಕಮರಿಗೆ : ಹಲವರಿಗೆ ಗಂಭೀರ ಗಾಯ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ :

ತಮಿಳುನಾಡಿನಿಂದ 60ಕ್ಕೂ ಹೆಚ್ಚು ಶಬರಿಮಲೆ ಭಕ್ತರನ್ನು ಕೊಂಡೊಯ್ಯುತ್ತಿದ್ದ ಬಸ್ ನಿಲಕ್ಕಲ್ ಬಳಿ ಕಮರಿಗೆ ಬಿದ್ದ ಪರಿಣಾಮ ಹಲವರು ಗಾಯಗೊಂಡಿರುವ ಘಟನೆ ಇಂದು ನಡೆದಿದೆ.

ಶಬರಿಮಲೆಯಿಂದ ಭಕ್ತರು ಹಿಂದಿರುಗುವಾಗ ಮಧ್ಯಾಹ್ನ 1:15 ಕ್ಕೆ ಈ ಅಪಘಾತ ಸಂಭವಿಸಿದೆ.

7 ಮಕ್ಕಳು ಸೇರಿದಂತೆ ಸುಮಾರು 68 ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ಬಸ್ ನಿಯಂತ್ರಣ ತಪ್ಪಿ ಕಮರಿಗೆ ಬಿದ್ದಿದೆ. ಬಳಿಕ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ಆರಂಭಿಸಿದ್ದಾರೆ.

ಪ್ರಯಾಣಿಕರಲ್ಲಿ 62 ಮಂದಿ ಗಾಯಗೊಂಡಿದ್ದು, ಕೆಲವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಅವರನ್ನು ಪಥನಂತಿಟ್ಟ ಮತ್ತು ಎರುಮೇಲಿಯ ವಿವಿಧ ಆಸ್ಪತ್ರೆಗಳಿಗೆ ಸ್ಥಳಾಂತರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!