April 12, 2026
Sunday, April 12, 2026
spot_img

ಭೀಕರ ಅಪಘಾತಕ್ಕೆ ಧಗಧಗ ಹೊತ್ತಿ ಉರಿದ ಬಸ್: ಬೈಕ್ ಸವಾರ ಸಜೀವ ದಹನ

ದಿಗಂತ ವರದಿ ವಿಜಯಪುರ:

ಸಾರಿಗೆ ಬಸ್ ಹಾಗೂ ಬೈಕ್ ಮುಖಾಮುಖಿ ಡಿಕ್ಕಿಯಾಗಿ ಸ್ಥಳದಲ್ಲಿಯೇ ಸಾರಿಗೆ ಬಸ್ ಧಗಧಗ ಹೊತ್ತಿ ಉರಿದಿದ್ದು, ಬೈಕ್ ಸವಾರ ಸಜೀವ ದಹನಗೊಂಡಿರುವ ಹೃದಯ ವಿದ್ರಾವಕ ಘಟನೆ ಜಿಲ್ಲೆಯ ಸಿಂದಗಿ ತಾಲೂಕಿನ ಕನ್ನೊಳ್ಳಿ ಟೋಲ್‌ಗೇಟ್ ಬಳಿ ನಡೆದಿದೆ.

ಮೃತಪಟ್ಟವನನ್ನು ಜಿಲ್ಲೆಯ ದೇವರಹಿಪ್ಪರಗಿ ತಾಲೂಕಿನ ಮುಳಸಾವಳಗಿ ಗ್ರಾಮದ ಅಭಿಷೇಕ ಸಾಯಬಗೌಡ ನಾಗರಾಳ ಎಂದು ಗುರುತಿಸಲಾಗಿದೆ.

ಸಾರಿಗೆ ಬಸ್ ಹಾಗೂ ಬೈಕ್ ಡಿಕ್ಕಿಯ ರಭಸಕ್ಕೆ ಬೈಕ್ ಟ್ಯಾಂಕಿನ ಪೆಟ್ರೋಲ್ ಚೆಲ್ಲಿ, ಬಸ್ ಗೆ ಬೆಂಕಿ ತಗುಲಿಕೊಂಡಿದ್ದು, ಬೆಂಕಿ ಬಸ್ ಗೆ ಆವರಿಸಿಕೊಂಡಿದೆ. ಅದೃಷ್ಟವಶಾತ್ ಪ್ರಯಾಣಿಕರು ಬಚಾವ್ ಆಗಿದ್ದು, ಬಸ್ ಅಡಿ ಸಿಲುಕಿದ್ದ ಬೈಕ್ ಸವಾರ ಸಜೀವ ದಹನಗೊಂಡಿದ್ದಾನೆ.

ಸ್ಥಳಕ್ಕೆ ಸಿಂದಗಿ ಅಗ್ನಿಶಾಮಕ ಸಿಬ್ಬಂದಿ ದೌಡಾಯಿಸಿ ಬೆಂಕಿ ನಂದಿಸಲು ಯತ್ನಿಸಿದ್ದು, ಸ್ಥಳಕ್ಕೆ ಪೊಲೀಸ್ ರು ಭೇಟಿ ನೀಡಿ ಪರಿಶೀಲಿಸಿದರು.

ಸಿಂದಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !