October 9, 2026
Friday, October 9, 2026
spot_img

ಮೋದಿ ಪೋಸ್ಟ್‌ ಬ್ಲಾಕ್‌ ಬೆನ್ನಲ್ಲೇ ಮೆಟಾಗೆ ಸಂಕಷ್ಟ: ಕೇಂದ್ರ ಸರ್ಕಾರದ ವಿಚಾರಣೆ ಆರಂಭ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪ್ರಧಾನಿ ನರೇಂದ್ರ ಮೋದಿ ಅವರ ಫೇಸ್‌ಬುಕ್ ಪೋಸ್ಟ್‌ ತಾತ್ಕಾಲಿಕವಾಗಿ ನಿರ್ಬಂಧಗೊಂಡ ಘಟನೆಗೆ ಸಂಬಂಧಿಸಿ ಕೇಂದ್ರ ಸರ್ಕಾರ ಮೆಟಾ ಸಂಸ್ಥೆಯ ಜಾಗತಿಕ ತಂಡವನ್ನು ವಿಚಾರಣೆಗೆ ಕರೆದಿದೆ.

ಅಲ್ಗಾರಿದಮ್ ಕಾರ್ಯವೈಖರಿ, ಪಕ್ಷಪಾತದ ಆರೋಪಗಳು ಹಾಗೂ ಸಾರ್ವಜನಿಕ ಸುವ್ಯವಸ್ಥೆ ಕಾಪಾಡುವಲ್ಲಿ ಕಂಪನಿಯ ಪಾತ್ರದ ಬಗ್ಗೆ ಸರ್ಕಾರ ಸ್ಪಷ್ಟನೆ ಕೇಳಲು ಮುಂದಾಗಿದೆ.

ಇದನ್ನೂ ಓದಿ:

ಮೂಲಗಳ ಪ್ರಕಾರ, ಮುಂದಿನ ವಾರ ಮೆಟಾದ ಜಾಗತಿಕ ಅಧಿಕಾರಿಗಳು ದೆಹಲಿಗೆ ಆಗಮಿಸುವ ಸಾಧ್ಯತೆಯಿದ್ದು, ಸಂಸದೀಯ ಸಮಿತಿಯ ಮುಂದೆಯೂ ಹಾಜರಾಗಲಿದ್ದಾರೆ. ಪ್ರಧಾನಿ ಪೋಸ್ಟ್‌ ನಿರ್ಬಂಧದ ಬಳಿಕ ಈ ಬೆಳವಣಿಗೆ ಮಹತ್ವ ಪಡೆದುಕೊಂಡಿದೆ.

ಮೆಟಾ ಈ ಘಟನೆ ತಾಂತ್ರಿಕ ದೋಷದಿಂದ ಸಂಭವಿಸಿದೆ ಎಂದು ಕ್ಷಮೆಯಾಚಿಸಿದ್ದರೂ, ಕೇಂದ್ರ ಸರ್ಕಾರ ಆ ಸ್ಪಷ್ಟೀಕರಣವನ್ನು ಸಮರ್ಪಕವೆಂದು ಪರಿಗಣಿಸಿಲ್ಲ. ಇತ್ತ ಹೈದರಾಬಾದ್‌ನಲ್ಲಿ ಮೆಟಾ ಇಂಡಿಯಾ ಮುಖ್ಯಸ್ಥರು ಹಾಗೂ ಕೆಲವು ಸಾಮಾಜಿಕ ಜಾಲತಾಣ ಖಾತೆಗಳ ವಿರುದ್ಧ ಸೈಬರ್ ಪ್ರಕರಣವೂ ದಾಖಲಾಗಿದೆ.

Must Read