September 8, 2026
Tuesday, September 8, 2026
spot_img

ಜನರಿಗೆ ಬೇಡವಾದ ಯೋಜನೆ ಸರ್ಕಾರಕ್ಕೂ ಬೇಡ: ಶಾಸಕ ಮಂಕಾಳ ವೈದ್ಯ ಸ್ಪಷ್ಟನೆ

ಹೊಸದಿಗಂತ ವರದಿ ಉತ್ತರ ಕನ್ನಡ:

ಉತ್ತರ ಕನ್ನಡದ ಜನರಿಗೆ ಬೇಡವಾದ ಯೋಜನೆಗಳು ನಮಗೂ ಬೇಡ. ರಾಜ್ಯ ಸರ್ಕಾರದಿಂದ ಜಿಲ್ಲೆಯಲ್ಲಿ ಯಾವ ಜನ ಯೋಜನೆಗಳೂ ಅನುಷ್ಠಾನ ಆಗುವುದಿಲ್ಲ ಎಂದು ಶಾಸಕ ಮಂಕಾಳ ವೈದ್ಯ ಹೇಳಿದರು.

ಶಿರಸಿಯಲ್ಲಿ ಮಾತನಾಡಿದ ಅವರು, ಶರಾವರಿ ಪಂಪ್ಡ್ ಸ್ಟೋರೇಜ್, ಬೇಡ್ತಿ, ಅಘನಾಶಿನಿ ನದಿಗಳ ಜಲ ಯೋಜನೆಗಳಿಗೆ ನಾವು ಸ್ವಾಮೀಜಿಗಳ ಅಧ್ಯಕ್ಷತೆಯಲ್ಲಿ ವಿರೋಧ ಮಾಡಿದ್ದೇವೆ‌. ಜನರಿಗೆ ಬೇಡವಾಗಿರುವುದು ನಮಗೂ ಬೇಡ. ಜಿಲ್ಲೆಯ ಜನರಿಗೆ ಬೇಡವಾದಲ್ಲಿ ಶಾಸಕರಿಗೂ ಬೇಡ. ಸರ್ಕಾರಕ್ಕೂ ಅಗತ್ಯವಿಲ್ಲ ಎಂದು ಸ್ಪಷ್ಟಪಡಿಸಿದರು.

ಇದನ್ನೂ ಓದಿ:

ಮುಂದಿನ ಎರಡು ದಿನದಲ್ಲಿ ಸಚಿವ ಸಂಪುಟ ವಿಸ್ತರಣೆ ನಡೆಯಲಿದೆ. ಜಿಲ್ಲೆಯಲ್ಲಿ ಯಾರಿಗೆ ಸಚಿವ ಸ್ಥಾನ ನೀಡಬೇಕು ಎಂದು ಹೈಕಮಾಂಡ್ ನಿರ್ಧಾರ ಮಾಡಲಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಜಿಲ್ಲೆಯಲ್ಲಿನ ಸಮಸ್ಯೆಯನ್ನು ನೋಡಿಕೊಳ್ಳಲು ಶಾಸಕರಿದ್ದಾರೆ.

ಕುಮಟಾ – ಹೊನ್ಮಾವರ ವಿಧಾನಸಭಾ ಕ್ಷೇತ್ರದಲ್ಲಿ ನಾನು ಇದ್ದು, ಜಿಲ್ಲೆಯ ಉಳಿದ 5 ಕ್ಷೇತ್ರದಲ್ಲಿ ಕಾಂಗ್ರೆಸ್ ಬೆಂಬಲಿತ ಶಾಸಕರಿದ್ದಾರೆ. ಅವರೇ ಉಸ್ತುವಾರಿಯಾಗಿ ಕೆಲಸ ಮಾಡಲಿದ್ದು, ಮುಖ್ಯಮಂತ್ರಿಗಳು ಅಗತ್ಯ ಅನುದಾನ ನೀಡಲಿದ್ದಾರೆ. ಹೆಚ್ಚಿನ ಇಲಾಖೆಯನ್ನು ಮುಖ್ಯಮಂತ್ರಿಗಳೇ ನಿಭಾಯಿಸುತ್ತಿದ್ದಾರೆ ಎಂದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !