ಮಾಲಿಯಲ್ಲಿ ಭಯೋತ್ಪಾದಕರ ಅಟ್ಟಹಾಸ: ಉಗ್ರ ಕೃತ್ಯಕ್ಕೆ 11 ಜನರು ಬಲಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಆಫ್ರಿಕಾ ರಾಷ್ಟ್ರ ಮಾಲಿಯಲ್ಲಿ ಜಿಹಾದಿಗಳ ಅಟ್ಟಹಾಸಕ್ಕೆ 11 ಜನರು ಸಾವನ್ನಪ್ಪಿ 53 ಜನರು ಗಾಯಗೊಂಡಿದ್ದಾರೆ. ಹೆಚ್ಚಿನ ಸಂಖ್ಯೆಯ ಜನರಿದ್ದ ಬಸ್‌ ಅನ್ನು ಭಯೋತ್ಪಾದಕರು ಸ್ಫೋಟಕ ಸಾಧನವೊಂದಕ್ಕೆ ಡಿಕ್ಕಿ ಹೊಡೆಸಿ ವಿಧ್ವಂಸಕ ಕೃತ್ಯವೆಸಗಿದ್ದಾರೆ.
ಬಂಡಿಯಾಗರಾ ಮತ್ತು ಗೌಂಡಕ ನಡುವಿನ ರಸ್ತೆಯ ಮೋಪ್ತಿ ಪ್ರದೇಶದಲ್ಲಿ ಬಸ್ ಸ್ಫೋಟಕ ಸಾಧನಕ್ಕೆ ಡಿಕ್ಕಿ ಹೊಡೆದಿದೆ ಎಂದು ಭದ್ರತಾ ಪಡೆಯ ಮೂಲಗಳು ತಿಳಿಸಿವೆ. ಈ ಪ್ರದೇಶವು ಜಿಹಾದಿ ಹಿಂಸಾಚಾರದ ಕೇಂದ್ರವಾಗಿದೆ.
ಪೊಲೀಸರು ಮತ್ತು ಸ್ಥಳೀಯ ಮೂಲಗಳ ಪ್ರಕಾರ, ಸ್ಥಳದಲ್ಲೇ 10 ಜನರು ಸಾವನ್ನಪ್ಪಿದ್ದಾರೆ. ಈ ವೇಳೆ ಹಲವರು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ ಮಾಲಿಯು ಪ್ರತಿದಿನ ಜಿಹಾದಿಗಳ ವಿಧ್ವಂಸಕ ಕೃತ್ಯಗಳ ವಿರುದ್ಧ ಹೋರಾಡುತ್ತಿದೆ. ಉಗ್ರರು ಸಾವಿರಾರು ಜೀವಗಳನ್ನು ಬಲಿತೆಗೆದುಕೊಳ್ಳುತ್ತಿದ್ದಾರೆ. ಮತ್ತು ಲಕ್ಷಾಂತರ ಜನರ ಮನೆಗಳನ್ನು ವಶಪಡಿಸಿಕೊಳ್ಳುತ್ತಿದೆ. ಅವರನ್ನು ಜಿಹಾದ್‌ ಉದ್ದೇಶಗಳಿಗೆ ಬಳಸಿಕೊಳ್ಳುತ್ತಿದೆ. ಈ ವಿನಾಶಕಾರಿ ಕೃತ್ಯಗಳ ಇತ್ತೀಚಿಸನ ಸರಣಿಯಾದ ಬಸ್ ಸ್ಫೋಟದಲ್ಲಿ ಕನಿಷ್ಠ 11 ಜನರು ಸಾವನ್ನಪ್ಪಿದ್ದಾರೆ. ಜಿಹಾದಿ ಹಿಂಸಾಚಾರದ ಕೇಂದ್ರ ಎಂದು ಕರೆಯಲ್ಪಡುವ ಮೋಪ್ಟಿ ಪ್ರದೇಶದಲ್ಲಿ ಬಸ್ ಸ್ಫೋಟಕ ಸಾಧನಕ್ಕೆ ಅಪ್ಪಳಿಸಿತು.
ಸುಧಾರಿತ ಸ್ಫೋಟಕ ಸಾಧನಗಳಿಗೆ (ಐಇಡಿಗಳು) ಜಿಹಾದಿಗಳು ಬಸ್‌ ಅನ್ನು ಡಿಕ್ಕಿಯಾಗಿಸಿದ್ದಾರೆ. ವಿಶ್ವಸಂಸ್ಥೆಯ ವರದಿಗಳ ಪ್ರಕಾರ ಆಗಸ್ಟ್ 31 ರ ಈಚೆಗೆ ಐಇಡಿ ಗಳನ್ನು ಬಳಸಿಕೊಂಡೇ ಉಗ್ರಪಡೆಗಳು 72 ಜನರನ್ನು ಕೊಂದುಹಾಕಿವೆ. ಈ ಕೃತ್ಯಗಳಲ್ಲಿ ಸೈನಿಕರು ಮತ್ತು ನಾಗರಿಕರು ಮೃತಪಟ್ಟಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!