ಬೊಲಿವಿಯಾದಲ್ಲಿ ಕಂದಕಕ್ಕೆ ಬಿದ್ದ ಬಸ್: ಕನಿಷ್ಠ 11 ಸಾವು, 18 ಮಂದಿ ಸ್ಥಿತಿ ಗಂಭೀರ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬೊಲಿವಿಯಾದ ಕೊಚಬಾಂಬದ ಕಮಿ ಮತ್ತು ಕ್ವಿಲ್ಲಾಕೊಲೊ ಪಟ್ಟಣದ ನಡುವಿನ ಹೆದ್ದಾರಿಯಲ್ಲಿ ಬಸ್‌ವೊಂದು ಕಂದಕಕ್ಕೆ ಬಿದ್ದಿದೆ.
ಈ ಪರಿಣಾಮ ಕನಿಷ್ಠ 11 ಮಂದಿ ಮೃತಪಟ್ಟಿದ್ದು, 18  ಜನ ಗಂಭೀರವಾಗಿ ಗಾಯಗೊಂಡಿದ್ದಾರೆ.
ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಕೊಚಬಾಂಬಾ ಪೊಲೀಸ್ ಇಲಾಖೆ ನಿರ್ದೇಶಕ ರೆಂಜೋ ಮಕಾರ್ಡೋ ಹೇಳಿದ್ದಾರೆ.
ಘಟನೆಗೆ ಕಾರಣ ಇನ್ನೂ ತಿಳಿದುಬಂದಿಲ್ಲ. ಮೃತರ ಗುರುತು ಕೂಡ ಪತ್ತೆಯಾಗಿಲ್ಲ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!