ಶಿಗ್ಗಾವಿಯಲ್ಲಿ ಬಸ್ ಡಿಪೋ, ತರಬೇತಿ ಕೇಂದ್ರ ಆರಂಭ: ಸಿಎಂ ಬೊಮ್ಮಾಯಿ

ಹೊಸದಿಗಂತ ವರದಿ, ಹಾವೇರಿ

ಕಳೆದ ೧೦ ವರ್ಷಗಳಿಂದ ಶಿಗ್ಗಾವಿಯಲ್ಲಿ ಬಸ್ ಡಿಪೋ ಆಗಬೇಕೆಂಬ ಬೇಡಿಕೆ ಇತ್ತು. ಈಗ ೨೮ ಕೋಟಿ ರೂಗಳ ವೆಚ್ಚದಲ್ಲಿ ಡಿಪೋ ಮತ್ತು ತರಬೇತಿ ಕೇಂದ್ರವನ್ನು ಆರಂಭಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಜಿಲ್ಲೆಯ ಶಿಗ್ಗಾವಿ ಪಟ್ಟಣದ ಹೊರವಲಯದಲ್ಲಿ ನಾಲ್ಕು ಎಕರೆ ಜಾಗೆಯಲ್ಲಿ ನೂತನ ಬಸ್ ಡಿಪೂ ಘಟಕ ಹಾಗೂ ವಾಹನ ಮೆಕ್ಯಾನಿಕ್ ಮತ್ತು ಚಾಲನಾ ತರಬೇತಿ ಐಟಿಐ ಪ್ರಾರಂಭೋತ್ಸವದ ಅಡಿಗಲ್ಲು ಸಮಾರಂಭವನ್ನು ನೆರವೇರಿಸಿ ಮಾತನಾಡಿದರು.

ಶಿಗ್ಗಾವ, ಸವಣೂರ ಪಟ್ಟಣಗಳಲ್ಲದೆ ಬಂಕಾಪುರವೂ ವೇಗವಾಗಿ ಬೆಳೆಯುತ್ತಿದೆಯಲ್ಲದೆ ಪ್ರತಿ ಗ್ರಾಮಗಳೂ ವಿಸ್ತರಣೆ ಆಗುತ್ತಿವೆ, ಶಾಲೆಗೆ ಹೋಗುವ ಮಕ್ಕಳ ಸಂಖ್ಯೆ, ಸಂತೆಗೆ ಹೋಗುವವರ ಸಂಖ್ಯೆ ಹೆಚ್ಚಾಗಿದೆ. ಕೈಗಾರಿಕೆಗಳ ಬೆಳವಣಿಗೆ ಹೆಚ್ಚುತ್ತಿದೆ. ಇದನ್ನೆಲ್ಲ ಗಮನದಲ್ಲಿಟ್ಟುಕೊಂಡು ಸಾರಿಗೆ ಸೌಲಭ್ಯಗಳನ್ನು ಹೆಚ್ಚಿಸುವುದಕ್ಕೆ ಸರ್ಕಾರ ಸೂಕ್ತ ಯೋಜನೆ ಮತ್ತು ಕ್ರಮಗಳನ್ನು ಕೈಗೊಳ್ಳುತ್ತಿದ ಎಂದು ತಿಳಿಸಿದರು.
ಈ ಭಾಗದ ಜನತೆಗೆ ವಾಯವ್ಯ ಕರ್ನಾಟಕ ಸಾರಿಗೆ ಸಂಸ್ಥೆಯ ಮೇಲೆನೆ ಅವಲಂಬಿತರಾಗಿದ್ದಾರೆ. ಇವರಿಗೆಲ್ಲ ಉತ್ತಮ ಸಾರಿಗೆ ಸೌಲಭ್ಯವನ್ನು ಒದಗಿಸುವುದಕ್ಕೆ ಈ ಭಾಗದಲ್ಲಿ ಬಸ್ ಡಿಪೂ ಬಹಳ ಅವಶ್ಯಕವಾಗಿತ್ತು. ಆಗ ಬಸ್ ಸೌಲಭ್ಯ ಹೆಚ್ಚಿನ ಪ್ರಮಾಣದಲ್ಲಿ ದೊರೆಯಲಿದೆ ಅದೀಗ ಸಾಕಾರಗೊಳ್ಳುವತ್ತ ಸಾಗಿದೆ ಎಂದರು.

ಮೆಕ್ಯಾನಿಕ್ ಮತ್ತು ಚಾಲನಾ ತರಬೇತಿ ಐಟಿಐ ಪ್ರಾರಂಭದಿಂದ ಈ ಭಾಗದ ಯುವ ಜನತೆಗೆ ತಾಂತ್ರಿಕ ಶಿಕ್ಷಣ ದೊರೆಯಲಿದೆ. ಶಿಗ್ಗಾವ ತಾಲೂಕಿನಲ್ಲಿ ಇನ್ನೊಂದು ಜಿಟಿಡಿಸಿ ಆರಂಭಕ್ಕೆ ಬರುವ ತಿಂಗಳು ಅಡಿಗಲ್ಲು ಮಾಡಲಾಗುವುದು. ಜೆಸಿಬಿಯ ತರಬೇತಿಯ ಘಟಕವನ್ನು ಶಿಗ್ಗಾವಿಗೆ ತರಲು ಪ್ರಯತ್ನ ನಡೆಸಿದೆ ಎಂದು ತಿಳಿಸಿದರು.

ಆಟೋಮೋಬೈದಲ್ಲಿ ಕ್ಷೇತ್ರದಲ್ಲಿ ಇನ್ನಷು ಉದ್ಯಮಗಳನ್ನು ಶಿಗ್ಗಾವ ತಾಲೂಕಿಗೆ ತರುವ ಪ್ರಯತ್ನ ಮಾಡಲಾಗುತ್ತಿದೆ ಅದು ಫಲಪ್ರದವಾಗುವ ಲಕ್ಷಣಗಳು ಕಂಡುಬರುತ್ತಿದೆ. ಡಿ.೧೮ ರಂದು ಎಥಿನಾಲ್ ತಯಾರಿಕಾ ಕಾರ್ಖಾನೆ ಪ್ರಾರಂಭವಾಗುತ್ತಿದೆ. ಶಿಕ್ಷಣ ಮತ್ತು ಉದ್ಯೋಗ ನೀಡುವ ಇಂಡಸ್ಟ್ರಿಯಲ್ ಪ್ರದೇಶವನ್ನಾಗಿ ಮಾಡುವ ಗುರಿಯನ್ನು ಇಟ್ಟುಕೊಳ್ಳಲಾಗಿದೆ ಎಂದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!