Saturday, January 28, 2023

Latest Posts

ಕಾಂಗ್ರೆಸ್ ನ ರಕ್ತದಲ್ಲೇ ರೌಡಿ ಸಂಸ್ಕೃತಿ ‌ಬಂದಿದೆ: ಸಚಿವ ಬಿ.ಶ್ರಿರಾಮುಲು

ಹೊಸದಿಗಂತ ವರದಿ, ಬಳ್ಳಾರಿ:

ಕುತಂತ್ರ ಹಾಗೂ ಸೇಡಿನ ರಾಜಕಾರಣ ಮಾಡುವಲ್ಲಿ ಕಾಂಗ್ರೆಸ್ ನವರು ನಿಶ್ಚೀಮರು, ಇವರಿಂದ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ, ಮಾಜಿ ಸಿ.ಎಂ.ಬಿ.ಎಸ್.ಯಡಿಯೂರಪ್ಪ ಅವರು ಜೈಲಿಗೆ ಹೋಗಬೇಕಾಯಿತು, ಇಬ್ಬರೂ ನಾಯಕರನ್ನು ಕುತಂತ್ರ ಬುದ್ದಿಯಿಂದ ಜೈಲಿಗೆ ಕಳಿಸಿದ್ದೇ ಕಾಂಗ್ರೆಸ್ ನವರು ಎಂದು ಸಾರಿಗೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ.ಶ್ರಿರಾಮುಲು ಅವರು ಹೇಳಿದರು.
ಭಾನುವಾರ ‌ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಕ್ರಮ ಗಣಿಗಾರಿಕೆ, ಗಡಿ ವಿಚಾರದಲ್ಲಿ ಕಾಂಗ್ರೆಸ್ ನವರು ಸೇಡಿನ ರಾಜಕಾರಣ ಮಾಡಿದ್ದು, ಅವರ ಕುತಂತ್ರದಿಂದ ನಾಯಕರು ಜೈಲಿಗೆ ಹೋಗಬೇಕಾಯಿತು, ಇದರಲ್ಲಿ ಕಾಂಗ್ರೆಸ್ ನವರ ಕೈವಾಡವಿದೆ, ಜನಾರ್ದನ ರೆಡ್ಡಿ ಅವರ ವಿರುದ್ಧ ದಾಖಲಾದ ಎಲ್ಲ ಪ್ರಕರಣಗಳು ನ್ಯಾಯಾಲಯದಲ್ಲಿ ವಿಚಾರಣೆ ನಡೆದಿದ್ದು, ಬಹುತೇಕ ಎಲ್ಲ ಪ್ರಕರಣಗಳು ಖುಲಾಸೆಯಾಗಿವೆ, ಇದನ್ನು ಗಮನಿಸಿದರೇ ಕಾಂಗ್ರೆಸ್ ನವರ ಕುತಂತ್ರ ರಾಜಕಾರಣ ಎಂಬುದು ಸಾಬೀತಾಗಿದೆ. ರೆಡ್ಡಿ ಅವರು ಅಕ್ರಮ ಗಣಿಗಾರಿಕೆ ನಡೆಸಿದ್ದಾರೆ ಎಂದು ಯ್ಯಾವ ನ್ಯಾಯಲಯದಲ್ಲೂ ಸಾಬೀತಾಗಿಲ್ಲ, ಆರೋಪಗಳಿಂದ ಮುಕ್ತರಾಗಲಿದ್ದಾರೆ ಎನ್ನುವ ವಿಶ್ವಾಸವಿದೆ ಎಂದರು.

ಬಿಜೆಪಿ ರೌಡಿ ಸಂಸ್ಕೃತಿ ಎಂದು ಕಾಂಗ್ರೆಸ್ ನವರು ಪೋಸ್ಟ್ ಮಾಡಿರುವದನ್ನು ಗಮನಿಸಿದ್ದೆ, ನಮ್ಮದು ರೌಡಿ ಸಂಸ್ಕೃತಿಯಲ್ಲ, ಕಾಂಗ್ರೆಸ್ ನ ರಕ್ತದಲ್ಲೇ ರೌಡಿ ಸಂಸ್ಕೃತಿ ‌ಬಂದಿದೆ, ಇದಕ್ಕೆ ಬೆಂಗಳೂರು ನಗರದಲ್ಲಿ ಅಖಂಡ ಶ್ರೀನಿವಾಸ್ ಅವರ ನಿವಾಸದ ಮೇಲೆ ಬೆಂಕಿ ಹಚ್ಚಿದ ಉದಾಹರಣೆ ಸಾಕು, ಇದಕ್ಕಿಂತ ಹೆಚ್ಚು ಕಾಂಗ್ರೆಸ್ ನವರ ಬಗ್ಗೆ ಹೇಳಬೇಕಾಗಿಲ್ಲ, ಕೆಪಿಸಿಸಿ ಅದ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಪಕ್ಕದಲ್ಲಿ ಕುಳಿತುಕೊಳ್ಳವವರನ್ನು ನೋಡಿ, ರೌಡಿ ಸಂಸ್ಕೃತಿ ನಮ್ಮದಾ, ಕಾಂಗ್ರೆಸ್ ನವರದ್ದಾ ಎಂಬುದು ಗೊತ್ತಾಗಲಿದೆ. ಕಾಂಗ್ರೆಸ್ ನವರ ಕುತಂತ್ರ, ರೌಡೊ ರಾಜಕಾರಣ ಇನ್ಮುಂದೆ ನಡೆಯೋಲ್ಲ, ರಾಜ್ಯದ ಪ್ರಜ್ಞಾವಂತ ಜನರು ಕಾಂಗ್ರೆಸ್ ನ್ನು ಮುಳುಗಿಸಲಿದ್ದಾರೆ ಎಂದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!