MOTIVATION | ಶ್ರೀಮಂತರಾಗೋಕೂ ಮುನ್ನ ಶ್ರೀಮಂತರ ಥರ ಆಡ್ಬೇಡಿ! ಸದ್ದಿಲ್ಲದೇ ಸೇವಿಂಗ್ಸ್‌ ಮಾಡಿ..

ಎಲ್ಲರಿಗೂ ಜೀವನದಲ್ಲಿ ದುಡ್ಡು ಬೇಕು, ಎಷ್ಟಿದ್ದರೂ ಇನ್ನೂ ಬೇಕು. ಜೋಪಡಿಯಲ್ಲಿ ಮಲಗುವವರಿಗೆ ಹೆಂಚಿನ ಮನೆ ಆಸೆ, ಹೆಂಚಿನ ಮನೆಯಲ್ಲಿದ್ದವರಿಗೆ ಆರ್‌ಸಿಸಿ ಮನೆ ಆಸೆ, ಆರ್‌ಸಿಸಿ ಮನೆಯಲ್ಲಿದ್ದವರಿಗೆ ಸ್ವಂತ ಮನೆ ಆಸೆ, ಸ್ವಂತ ಮನೆಯಲ್ಲಿದ್ದವರಿಗೆ ಬಂಗಲೆ ಆಸೆ, ಬಂಗಲೆ ಇದ್ದವರಿಗೆ ನೂರು ಬಂಗಲೆ ಕೊಳ್ಳುವಾಸೆ, ನೂರು ಬಂಗಲೆ ಇದ್ದವರಿಗೆ ಬೇರೆ ಗ್ರಹದಲ್ಲಿಯೂ ಸೈಟ್‌ ಕೊಳ್ಳೋ ಆಸೆ..

ಎಲ್ಲರೂ ಹೇಳುತ್ತಾರೆ ದುಡ್ಡಿನಿಂದ ಸಂತೋಷ ಸಿಗೋದಿಲ್ಲ ಎಂದು, ನಿಜವಾಗಿಯೂ ಈ ಮಾತು ಸತ್ಯವಾ? ಆಲೋಚಿಸಿ..
ನಿಮ್ಮ ಮನೆಯ ಕೆಲಸದವರ ಮಗನಿಗೆ ಸೈಕಲ್‌ ಕೊಳ್ಳೋ ಆಸೆ, ಆದರೆ ಅದು ನಕ್ಷತ್ರದಷ್ಟೇ ದೂರ. ನಿಮ್ಮ ಬಳಿಯೂ ಉದಾರವಾಗಿ ಸೈಕಲ್‌ ಕೊಡಿಸೋ ಅಷ್ಟು ದುಡ್ಡಿಲ್ಲ. ಅಕಸ್ಮಾತ್‌ ದುಡ್ಡು ಇತ್ತು ಎಂದುಕೊಳ್ಳಿ, ಆ ಮಗುವಿಗೆ ಸೈಕಲ್‌ ಕೊಡಿಸಬಹುದಲ್ವಾ? ಇದರಿಂದ ಆ ಮಗುಗೆ ಸಂತೋಷ ಆಗೋದಿಲ್ವಾ? ಸಂತೋಷ ಹಾಗೂ ಹಣ ಎರಡೂ ಒಂದರ ಮೇಲೊಂದು ಡಿಪೆಂಡ್‌ ಆಗಿದೆ.

ದುಡ್ಡಿದ್ದವರು ಮಾತ್ರ ಖುಷಿಯಾಗಿರ್ತಾರೆ ಅಂತಲ್ಲ, ಕೆಲವೊಂದು ಖುಷಿಗಳಿಗೆ ಅದನ್ನು ಎಷ್ಟು ದುಡ್ಡು ಕೊಟ್ಟರೂ ಕೊಳ್ಳೋಕೆ ಆಗೋದಿಲ್ಲ. ಮಗುವಿನ ಮೊದಲ ನಗು, ತೊದಲ ಮಾತು. ಹಿರಿಯರ ಆಶೀರ್ವಾದ, ದೇವರ ಭಕ್ತಿ.. ಹೀಗೆ ಸಾಕಷ್ಟು…

ಎಂದಿಗೂ ದುಡ್ಡಿಲ್ಲದೆ ದುಡ್ಡಿರುವವರ ಥರ ಆಡಬೇಡಿ, ನೀವು ಎಲ್ಲವನ್ನೂ ಕಳೆದುಕೊಂಡುಬಿಡುತ್ತೀರಿ. ಯಾರನ್ನೋ ಇಂಪ್ರೆಸ್‌ ಮಾಡಲು ದುಡ್ಡು ಇಲ್ಲ ಎಂದರೂ ಸಾಲ ಮಾಡಿಯೋ ಅಥವಾ ಇರುವ ದುಡ್ಡನ್ನೆಲ್ಲಾ ಒಂದರ ಮೇಲೆಯೇ ಹಾಕಿ ಮೂರ್ಖರಾಗಬೇಡಿ..

ಏಕಾಏಕಿ ಯಾರೂ ಶ್ರೀಮಂತರಾಗೋದಿಲ್ಲ ( ತಂದೆ ತಾಯಿ, ಅಜ್ಜ ಅಜ್ಜಿ ಆಸ್ತಿ ಸಿಕ್ಕೋರು ಬಿಟ್ಟು) ಶ್ರೀಮಂತರಾಗೋಕೆ ಇಂದಿನಿಂದಲೇ ಪ್ರಯತ್ನ ಪಡಿ..

ಇವತ್ತಿನಿಂದಲೇ ಸೇವಿಂಗ್ಸ್‌ ಆರಂಭಿಸಿ
ಅವಶ್ಯಕತೆ ಇಲ್ಲದ ವಸ್ತುಗಳನ್ನು ಖರೀದಿಸಿ ಸಾಲದ ಸುಳಿಯಲ್ಲಿ ಸಿಲುಕಬೇಡಿ.
ನಿಮ್ಮ ಸಂಬಳದ 15% ನನ್ನದಲ್ಲ ಎಂದು ಎತ್ತಿಡಿ.
ಸಾಧ್ಯವಾದರೆ ಎರಡು ಕೆಲಸ ಅಥವಾ ಕೆಲಸ ಬದಲಾವಣೆ ಮೂಲಕ ಹೆಚ್ಚು ಹಣ ಗಳಿಸಿ.
ಅನಾವಶ್ಯಕ ವಸ್ತುಗಳ ಖರೀದಿ ಮಾಡಬೇಡಿ.
ಎಲ್ಲಿ ಇನ್ವೆಸ್ಟ್‌ ಮಾಡಬೇಕು, ಹೇಗೆ ಮಾಡಬೇಕು ಚೆನ್ನಾಗಿ ತಿಳಿದುಕೊಳ್ಳಿ.
ಮಂಥ್ಲಿ ಬಜೆಟ್‌ ಮಾಡಿ, ಅದಕ್ಕೆ ಸ್ಟಿಕ್‌ ಆಗಿ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!