ರಾಮನಗರದಲ್ಲಿ ಭಾರೀ ಮಳೆಗೆ ನೀರಿನಲ್ಲಿ ತೇಲಿಹೋಗುತ್ತವೆ ಬಸ್ಸು, ಲಾರಿ

ಹೊಸದಿಗಂತ ವರದಿ, ರಾಮನಗರ 
ರಾಮನಗರದಲ್ಲಿ ಧಾರಾಕಾರ ಮಳೆಯಿಂದಾಗಿ ಭಾರೀ ಅನಾಹುತಗಳಾಗಿದೆ. ಇಂದು ಬೆಳಗ್ಗಿನ ಜಾವದಿಂದ ವ್ಯಾಪಕ ಮಳೆಯಾಗುತ್ತಿದೆ. ರಾಮನಗರ ಸಮೀಪ ರಾಷ್ಟ್ರೀಯ ಹೆದ್ದಾರಿ ಮುಳುಗಡೆಯಾಗಿದ್ದು, ಬಸ್​, ಲಾರಿ, ಕಾರುಗಳು ನೀರಿನಲ್ಲಿ ತೇಲಾಡುತ್ತಿದೆ.
ಚನ್ನಪಟ್ಟಣ ಶೇರ್ವ ಸರ್ಕಲ್ ಬಳಿ ಕುನ್ನೀರುಕಟ್ಟೆ ಕೋಡಿ ಹೊಡೆದಿದೆ. ಪೇಟೆ ಕೇರಿಗೆ ನೀರು ನುಗ್ಗಿ ಜನಜೀವನ ಅಸ್ತವ್ಯಸ್ತವಾಗಿದೆ. ಮನೆಗಳಿಗೆ ನುಗ್ಗಿದ ನೀರು ಹೊರಹಾಕಲು ಹರಸಾಹಸ ಪಟ್ಟಿದ್ಧಾರೆ. ಸ್ಕೂಲ್​​-ಕಾಲೇಜು, ಕೆಲಸಕ್ಕೆ ಹೋಗಲು ಜನರ ಪರದಾಟ ನಡೆಸಿದ್ದು,
ಮೈಸೂರು-ಬೆಂಗಳೂರು ಹೆದ್ದಾರಿ ಸಂಪೂರ್ಣ ಜಲಾವೃತವಾಗಿದೆ. ರಾಮನಗರ, ಬಿಡದಿ, ಚನ್ನಪಟ್ಟಣ, ಬೈರಾಪಟ್ಟಣ ಬಳಿ ಅಸ್ತವ್ಯಸ್ತವಾಗಿದೆ. ಗೌರಿ-ಗಣೇಶ ಹಬ್ಬಕ್ಕೆ ತೆರಳುತ್ತಿದ್ದ ಪ್ರಯಾಣಿಕರ ಪರದಾಟ ನಡೆಸುವಂತಾಗಿದೆ.
ಚನ್ನಪಟ್ಟಣ ಶೇರ್ವ ಸರ್ಕಲ್ ಬಳಿ ಕುನ್ನೀರುಕಟ್ಟೆ ಕೋಡಿ ಹೊಡೆದಿದೆ. ಪೇಟೆ ಕೇರಿಗೆ ನೀರು ನುಗ್ಗಿ ಜನಜೀವನ ಅಸ್ತವ್ಯಸ್ತವಾಗಿದೆ. ಮನೆಗಳಿಗೆ ನುಗ್ಗಿದ ನೀರು ಹೊರಹಾಕಲು ಹರಸಾಹಸ ಪಟ್ಟಿದ್ಧಾರೆ. ಸ್ಕೂಲ್​​-ಕಾಲೇಜು, ಕೆಲಸಕ್ಕೆ ಹೋಗಲು ಜನರ ಪರದಾಟ ನಡೆಸಿದ್ದು, ಮೈಸೂರು-ಬೆಂಗಳೂರು ಹೆದ್ದಾರಿ ಸಂಪೂರ್ಣ ಜಲಾವೃತವಾಗಿದೆ. ರಾಮನಗರ, ಬಿಡದಿ, ಚನ್ನಪಟ್ಟಣ, ಬೈರಾಪಟ್ಟಣ ಬಳಿ ಅಸ್ತವ್ಯಸ್ತವಾಗಿದೆ. ಗೌರಿ-ಗಣೇಶ ಹಬ್ಬಕ್ಕೆ ತೆರಳುತ್ತಿದ್ದ ಪ್ರಯಾಣಿಕರು ಪರದಾಟ ನಡೆಸುವಂತಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!