ಬೆಣ್ಣೆ ದೋಸೆ, ಮಸಾಲ ದೋಸೆ, ಈರುಳ್ಳಿ ದೋಸೆ: ಆಳ್ವಾಸ್ ಜಾಂಬೂರಿಯಲ್ಲಿದೆ 99 ವೆರೈಟಿ ದೋಸೆ!

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಬೆಣ್ಣೆ ದೋಸೆ, ಮಸಾಲ ದೋಸೆ, ಈರುಳ್ಳಿ ದೋಸೆಗಳ ರುಚಿ ವೈಶಿಷ್ಟ್ಯ ಎಲ್ಲರಿಗೂ ಗೊತ್ತಿರುವಂಥದ್ದೇ. ದೋಸೆಯ ತಿನಿಸು ಪ್ರಬೇಧವೊಂದರಲ್ಲಿಯೇ 99 ಪ್ರಕಾರಗಳಿರೋದು ನಿಮಗೆ ಗೊತ್ತಾ? ಇದನ್ನು ಗೊತ್ತು ಮಾಡಿಕೊಳ್ಳಬೇಕಾದರೆ ನೀವು ಮೂಡುಬಿದಿರೆ ಆಳ್ವಾಸ್ ಶಿಕ್ಷಣ ಸಂಸ್ಥೆಯ ವಿದ್ಯಾಗಿರಿಯಲ್ಲಿ ನಡೆಯುತ್ತಿರುವ ಅಂತಾರಾಷ್ಟ್ರೀಯ ಸ್ಕೌಟ್ಸ್ ಮತು ಗೈಡ್ಸ್ ಸಾಂಸ್ಕೃತಿಕ ಜಾಂಬೂರಿ ಪ್ರಯುಕ್ತ ನಡೆಯುತ್ತಿರುವ ಆಹಾರ ಮೇಳಕ್ಕೊಮ್ಮೆ ಭೇಟಿ ನೀಡಬೇಕು.

ಕಾರ್ಕಳದ ಕಿರಣ್ ಶೆಟ್ಟಿ ಇಷ್ಟೊಂದು ಬಗೆಯ ದೋಸೆಗಳನ್ನು ಸಿದ್ಧಪಡಿಸಿ ಕೊಡುತ್ತಿದ್ದಾರೆ. ಜನರಿಗೆ ವಿಭಿನ್ನ ರುಚಿಯ ದೋಸೆಗಳನ್ನ ಪರಿಚಯಿಸುವ ಉದ್ದೇಶದಿಂದ ಆಹಾರ ಮೇಳದಲ್ಲಿ ಭಾಗಿಯಾಗಿದ್ದಾರೆ ಅವರು. ಅವರು ಕಣ್ಣೆದುರಿಗೇ ಸಿದ್ಧಪಡಿಸಿಕೊಡುವ ಪಿಜ್ಜಾ ದೋಸೆ, ಚೀಸ್ ದೋಸೆ, ಪನ್ನೀರ್ ಚೀಸ್ ದೋಸೆ ಎಲ್ಲರ ಫೇವರಿಟ್ ಎನ್ನಿಸಿವೆ.

ಜನರಿಗೆ ಸಾಮಾನ್ಯವಾಗಿ ಹೊರಗಿನ ಆಹಾರ ತಿನ್ನಲು ರಾಸಾಯನಿಕಗಳ ಬಳಕೆಯಾಗಿರಬಹುದು ಎನ್ನುವ ಭಯವಿರುತ್ತದೆ, ಆದರೆ ಇಲ್ಲಿ ಯಾವುದೇ ರಾಸಾಯನಿಕ ಮತ್ತು ಟೇಸ್ಟಿಂಗ್ ಪೌಡರ್ ಬಳಸದೆ ಕಣ್ನೆದುರಲ್ಲೇ ನಾವು ಹೇಳಿದ ಪ್ರಕಾರದ ದೋಸೆಯನ್ನ ಮತ್ತು ಜ್ಯೂಸ್ ಅನ್ನು ಸಿದ್ದಪಡಿಸಿ ಕೊಡುತ್ತಾರೆ ಎನ್ನುವುದು ವಿಶೇಷ.

ದೋಸೆಯ ವಿಧದ ಮೇಲೆ ಅದರ ಬೆಲೆ ನಿಗದಿಯಾಗಿದ್ದು 50 ರೂಪಾಯಿಂದ ಆರಂಭವಾಗಿ 150ರೂ.ಗಳ ತನಕ ದೋಸೆಗಳು ಸಿಗತ್ತವೆ. ಪಿಜ್ಜಾ ದೋಸೆ ಇವರ ಸ್ಪೆಷಲ್ ಆಗಿದ್ದು ಪಿಜ್ಜಾ ಪ್ರೀಯರಿಗೆ ಹಾಗೂ ದೋಸಾ ಪ್ರಿಯರಿಗೆ ವಿಭಿನ್ನವಾದ ಹೊಸ ರುಚಿಯನ್ನು ನೀಡುತ್ತದೆ. ನೀವೇನಾದ್ರೂ ಜಾಂಬೂರಿ ಯ ಆಹಾರ ಮೇಳದ ಕಡೆ ಭೇಟಿ ನೀಡಿದ್ರೆ ಇಲ್ಲಿಗೆ ಒಂದು ವಿಸಿಟ್ ನೀಡೋದನ್ನು ಮರೆಯಬೇಡಿ!

ಪ್ರಸೀದ್ ಭಟ್, ಉಜಿರೆ ಎಸ್‌ಡಿಎಂ ಸ್ನಾತಕೋತ್ತರ ಕೇಂದ್ರದ ದ್ವಿತೀಯ ಪತ್ರಿಕೋದ್ಯಮ, ಸಂವಹನ ವಿಭಾಗ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!