ಹೊಸದಿಗಂತ ಡಿಜಿಟಲ್ ಡೆಸ್ಕ್:
ಡೊನಾಲ್ಡ್ ಟ್ರಂಪ್ ಪ್ರತಿಸುಂಕದ ಪ್ರಭಾವ, ಷೇರು ಮಾರುಕಟ್ಟೆ ಅಲ್ಲೋಲ ಕಲ್ಲೋಲವಾಗಿದೆ. ಇದರ ಮಧ್ಯೆ ಚಿನ್ನದ ದರ ಇಳಿಕೆಯಾಗಿದ್ದು, ಗೋಲ್ಡ್ ಪ್ರಿಯರಿಗೆ ಗುಡ್ ನ್ಯೂಸ್ ಸಿಕ್ಕಿದೆ.
ಶರವೇಗದಲ್ಲಿ ಚಿನ್ನದ ದರ ಏರಿಕೆ ಕಂಡಿತ್ತು. ಜನ ಸಾಮಾನ್ಯರು ಚಿನ್ನ ಮುಟ್ಟಿದ್ರೇ ಶಾಕ್ ಎಂಬ ಪರಿಸ್ಥಿತಿ ಉದ್ಭವವಾಗಿತ್ತು. ಆದರೀಗ ಟ್ರಂಪ್ ಸುಂಕ ನೀತಿಯಿಂದ ಚಿನ್ನದ ದರ ಇಳಿಕೆ ಕಂಡಿದೆ.
22 ಕ್ಯಾರೆಟ್ 1 ಗ್ರಾಂ ಚಿನ್ನದ ಬೆಲೆ 8,285 ರೂಪಾಯಿ ಆಗಿದೆ. 24 ಕ್ಯಾರೆಟ್ ಚಿನ್ನದ ದರ 9,038 ರೂಪಾಯಿ ಆಗಿದೆ. 22 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆಯಲ್ಲಿ 250 ರೂ. ಕಡಿಮೆ ಆಗಿದೆ.