ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತದಿಂದ ಜವಳಿ ರಫ್ತು ಮೂರು ಲಕ್ಷ ಕೋಟಿ ರೂ ಮಟ್ಟ ಮುಟ್ಟಿದೆ. 2030ರೊಳಗೆ ಜವಳಿ ರಫ್ತು ಪ್ರಮಾಣ 9 ಲಕ್ಷ ಕೋಟಿ ರೂ ತಲುಪಬೇಕೆನ್ನುವುದು ನಮ್ಮ ಗುರಿ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಭಾರತ್ ಜವಳಿ ಮೇಳದಲ್ಲಿ ಮಾತನಾಡುತ್ತಿದ್ದ ಪ್ರಧಾನಿ ನರೇಂದ್ರ ಮೋದಿ, ‘ಇವತ್ತು ಭಾರತ ವಿಶ್ವದ ಆರನೇ ಅತಿದೊಡ್ಡ ಜವಳಿ ರಫ್ತುದಾರ ದೇಶ ಎನಿಸಿದೆ. ನಮ್ಮ ಜವಳಿ ರಫ್ತು ಈಗ ಮೂರು ಲಕ್ಷ ಕೋಟಿ ರೂ ಮುಟ್ಟಿದೆ. 2030ರೊಳಗೆ ಇದು ಒಂಬತ್ತು ಲಕ್ಷ ಕೋಟಿ ರೂ ಮುಟ್ಟಬೇಕು ಎನ್ನುವುದು ನಮ್ಮ ಗುರಿ. ನಾವು ನಿರೀಕ್ಷಿಸಿದುದಕ್ಕಿಂತಲೂ ಬೇಗನೇ ಗುರಿ ಮುಟ್ಟಬಹುದು ಎನಿಸುತ್ತಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.