Friday, June 2, 2023

Latest Posts

SHOCKING |ದೇಶದಲ್ಲಿ 2050ರ ವೇಳೆಗೆ ನೀರಿಗೂ ಪರಿತಪಿಸೋ ಪರಿಸ್ಥಿತಿ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಭಾರತದಲ್ಲಿ 2050ರ ವೇಳೆಗೆ ನೀರಿಗೆ ಭಾರೀ ಅಭಾವ ಸೃಷ್ಟಿಯಾಗುವ ಸಂಭವವಿದೆ ಎಂದು ವಿಶ್ವಸಂಸ್ಥೆ ಹೇಳಿದೆ.
ಈಗಾಗಲೇ ನೀರಿನ ಕೊರತೆ ಅನುಭವಿಸುತ್ತಿರುವ ಜಾಗತಿಕ ನಗರಗಳ ಜನಸಂಖ್ಯೆ ಹೆಚ್ಚಾಗುವ ನಿರೀಕ್ಷೆಯಿದ್ದು, ನೀರಿನ ಅಭಾವ ಆಗಲಿದೆ ಎನ್ನಲಾಗಿದೆ.

ವಿಶ್ವಸಂಸ್ಥೆಯು ನೈರ್ಮಲ್ಯ ಹಾಗೂ ಕುಡಿಯುವ ನೀರಿನ ಕುರಿತಂತೆ ವಿಶ್ವಸಂಸ್ಥೆ ಕಳವಳಕಾರಿ ಮಾಹಿತಿ ಹೊರ ಹಾಕಿದ್ದು, ವಿಶ್ವದ ಜನಸಂಖ್ಯೆಯಲ್ಲಿ ಶೇ.26 ರಷ್ಟು ಪ್ರತಿಶತದಷ್ಟು ಜನರಿಗೆ ಕುಡಿಯುವ ಶುದ್ಧ ನೀರು ಲಭ್ಯವಾಗುವುದಿಲ್ಲ, ಜತೆಗೆ ಶೇ.46ರಷ್ಟು ಜನರು ನೈರ್ಮಲ್ಯದ ಸಮಸ್ಯೆ ಎದುರಿಸುತ್ತಾರೆ ಎಂದು ಹೇಳಿದೆ.

ಕಳೆದ ನಾಲ್ಕು ವರ್ಷದಿಂದ ಜಾಗತಿಕವಾಗಿ ನೀರಿನ ಬಳಕೆ ಹೆಚ್ಚಾಗಿದೆ, 2050ರ ಹೊತ್ತಿಗೆ ಭಾರತದಲ್ಲಿ ಸುಮಾರು 3,700ಕ್ಕೂ ಹೆಚ್ಚು ಅಣೆಕಟ್ಟುಗಳು ತಮ್ಮ ಒಟ್ಟು ನೀರು ಸಂಗ್ರಹಣೆಯ ಸಾಮರ್ಥ್ಯದಲ್ಲಿ ಶೇ.26ರಷ್ಟನ್ನು ಕಳೆದುಕೊಳ್ಳಲಿವೆ ಎನ್ನಲಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!