Friday, June 2, 2023

Latest Posts

VIRAL VIDEO| ಲಂಡನ್‌ನ ಭಾರತೀಯ ರಾಯಭಾರಿ ಕಚೇರಿ ಮೇಲೆ ಬೃಹತ್ ತ್ರಿವರ್ಣ ಧ್ವಜ: ಖಲಿಸ್ತಾನಿಗಳಿಗೆ ದಿಟ್ಟ ಉತ್ತರ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಖಲಿಸ್ತಾನ್ ಪ್ರತ್ಯೇಕತಾವಾದಿಗಳಿಗೆ ಭಾರತೀಯರು ದಿಟ್ಟ ಪ್ರತ್ಯುತ್ತರ ನೀಡಿದ್ದಾರೆ. ಲಂಡನ್‌ನಲ್ಲಿರುವ ಭಾರತೀಯ ರಾಯಭಾರಿ ಕಚೇರಿಯ ಮೇಲೆ ಬೃಹತ್ ತ್ರಿವರ್ಣ ಭಾರತೀಯ ಧ್ವಜವನ್ನು ಹಾರಿಸಿದ್ದು, ಇದಕ್ಕೆ ಸಂಬಂಧಿಸಿದ ವಿಡಿಯೋವೊಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಅಮೃತಪಾಲ್ ಸಿಂಗ್ ಗಾಗಿ ಪೊಲೀಸರು ಬೇಟೆ ಆರಂಭಿಸುತ್ತಿದ್ದಂತೆ, ಬ್ರಿಟನ್‌ನಲ್ಲಿ ಖಾಲಿಸ್ತಾನ್ ಬೆಂಬಲಿಗರು ಭಾರತೀಯ ರಾಯಭಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು. ಕಚೇರಿಯಲ್ಲಿದ್ದ ಭಾರತದ ರಾಷ್ಟ್ರಧ್ವಜ ಕೆಳಗಿಳಿಸಲು ಯತ್ನಿಸಿ, ಪೀಠೋಪಕರಣಗಳನ್ನು ನಾಶಮಾಡಿದ್ದರು. ಮೇಲಾಗಿ ಆಗ ಅಲ್ಲಿನ ಸರ್ಕಾರ ಪೊಲೀಸ್ ಭದ್ರತೆಯನ್ನೂ ಏರ್ಪಡಿಸಿರಲಿಲ್ಲ. ಈ ಕ್ರಮಕ್ಕೆ ಭಾರತ ಸರ್ಕಾರ ಆಕ್ರೋಶ ವ್ಯಕ್ತಪಡಿಸಿ, ಭಾರತದಲ್ಲಿನ ಬ್ರಿಟಿಷ್ ರಾಯಭಾರಿಗೆ ನೋಟಿಸ್ ನೀಡಲಾಗಿತ್ತು. ಏತನ್ಮಧ್ಯೆ, ಲಂಡನ್‌ನಲ್ಲಿರುವ ಭಾರತೀಯರು ಈ ವಿಷಯಕ್ಕೆ ಪ್ರತಿಕ್ರಿಯಿಸಿ ಖಾಲಿಸ್ತಾನದ ಬೆಂಬಲಿಗರ ಕ್ರಮಗಳ ವಿರುದ್ಧ ಪ್ರತಿಭಟಿಸಿದ್ದಾರೆ.

ಲಂಡನ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯ ಮೇಲೆ ಭಾರತದ ಅತಿದೊಡ್ಡ ರಾಷ್ಟ್ರಧ್ವಜವನ್ನು ಹಾರಿಸಲಾಯಿತು. ಭಾರತದ ಪರವಾಗಿ ಘೋಷಣೆಗಳು ಮೊಳಗಿದವು. ಈ ಘಟನೆಗಳ ಹಿನ್ನೆಲೆಯಲ್ಲಿ ಬ್ರಿಟನ್ ಸರ್ಕಾರ ರಾಯಭಾರಿ ಕಚೇರಿಯಲ್ಲಿ ಬಿಗಿ ಭದ್ರತೆ ಏರ್ಪಡಿಸಿ ಬ್ಯಾರಿಕೇಡ್‌ಗಳನ್ನೂ ಹಾಕಲಾಗಿದೆ. ಮತ್ತೊಮ್ಮೆ ಖಲಿಸ್ತಾನ್ ಮತ್ತು ಅಮೃತಪಾಲ್ ಸಿಂಗ್ ಬೆಂಬಲಿಸಿ ಖಲಿಸ್ತಾನ್ ಧ್ವಜಗಳೊಂದಿಗೆ ಘೋಷಣೆಗಳನ್ನು ಎತ್ತಿದರು. ತಡೆದ ಪೊಲೀಸರ ಮೇಲೆ ಮಸಿ ಎರಚಲಾಯಿತು. ಪ್ರತಿಭಟನಾಕಾರರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!