ಹೊಸ ದಿಗಂತ ಡಿಜಿಟಲ್ ಡೆಸ್ಕ್:
ರಿಲಯನ್ಸ್ ಜಿಯೋ ದೇಶಾದ್ಯಂತ ಈಗಾಗಲೇ 277 ನಗರಗಳಲ್ಲಿ ಟ್ರೂ 5ಜಿ ಸೇವೆ ಪ್ರಾರಂಭಿಸಿದ್ದು, ಈ ವರ್ಷದ ಡಿಸೆಂಬರ್‌ನೊಳಗೆ ದೇಶದ ಪ್ರತಿ ಪಟ್ಟಣ, ತಾಲೂಕು ಮತ್ತು ತಹಸಿಲ್‌ಗಳನ್ನು ಒಳಗೊಂಡಂತೆ ದೇಶಾದ್ಯಂತ ಜಿಯೋ 5ಜಿ ಸೇವೆ ಆರಂಭಿಸಲಿದೆ ಎಂದು ರಿಲಯನ್ಸ್ ಜಿಯೋ ಇನ್ಫೋಕಾಮ್ ಲಿಮಿಟೆಡ್ ಅಧ್ಯಕ್ಷ ಆಕಾಶ್ ಅಂಬಾನಿ ಮಂಗಳವಾರ ಹೇಳಿದ್ದಾರೆ.
ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವಾಲಯ ಮತ್ತು ಉದ್ಯಮ ಮತ್ತು ಆಂತರಿಕ ವ್ಯಾಪಾರ ಉತ್ತೇಜನ ಇಲಾಖೆ ವತಿಯಿಂದ ಆಯೋಜಿಸಲಾದ ಬಜೆಟ್ ನಂತರದ ವೆಬಿನಾರ್ ಉದ್ದೇಶಿಸಿ ಮಾತನಾಡಿದ ಅವರು, ಇದು ವಿಶ್ವದ ಅತ್ಯಂತ ವೇಗವಾದ 5G ರೋಲ್‌ಔಟ್ ಆಗಲಿದೆ ಎಂದು ಹೇಳಿದರು.
ಜಿಯೋ 700 Mhz ಮತ್ತು 3500Mhz ಬ್ಯಾಂಡ್‌ನಲ್ಲಿ 5G ನೆಟ್‌ವರ್ಕ್‌ನ 40,000 ಕ್ಕೂ ಹೆಚ್ಚು ಸೈಟ್‌ಗಳು ಮತ್ತು ಸುಮಾರು 2,50,000 ಸೆಲ್‌ಗಳನ್ನು ನಿಯೋಜಿಸಿದೆ. ಪ್ರತಿ ತಿಂಗಳು ಕಳೆದಂತೆ ವಿವಿಧ ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳು ಮತ್ತು ತಾಲೂಕುಗಳಲ್ಲಿ ಜಿಯೋ 5G ಆರಂಭಿಸುವ ಹಾದಿಯಲ್ಲಿ ನಾವಿದ್ದೇವೆ ಎಂದರು. ಟ್ರೂ 5G ತಂತ್ರಜ್ಞಾನದ ಅವಶ್ಯಕತೆಗಳನ್ನು ಪೂರೈಸಲು ಸೂಕ್ತವಾದ ವಿಶ್ವದ ಅತಿದೊಡ್ಡ ಸ್ಟ್ಯಾಂಡ್ ಅಲೋನ್ ನೆಟ್‌ವರ್ಕ್ ಆರ್ಕಿಟೆಕ್ಚರ್‌ನೊಂದಿಗೆ ಜಿಯೋ ದೇಶದಲ್ಲಿ 5G ನೆಟ್‌ವರ್ಕ್ ರೋಲ್‌ಔಟ್ ಮಾಡುತ್ತಿದೆ ಎಂದು ಆಕಾಶ್ ಅಂಬಾನಿ ತಿಳಿಸಿದರು.