ಇಂದು 6 ರಾಜ್ಯಗಳ 7 ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯ ಫಲಿತಾಂಶ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಕಳೆದ ವಾರ ಆರು ರಾಜ್ಯಗಳ ಏಳು ವಿಧಾನಸಭಾ ಸ್ಥಾನಗಳಿಗೆ ನಡೆದ ಉಪಚುನಾವಣೆಯ ಫಲಿತಾಂಶ ಇಂದು ಪ್ರಕಟವಾಗಲಿದೆ.

ಉತ್ತರಾಖಂಡದ ಬಾಗೇಶ್ವರ್, ಉತ್ತರ ಪ್ರದೇಶದ ಘೋಸಿ, ಕೇರಳದ ಪುತ್ತುಪಲ್ಲಿ, ಪಶ್ಚಿಮ ಬಂಗಾಳದ ಧುಪ್ಗುರಿ, ಜಾರ್ಖಂಡ್‌ನ ಡುಮ್ರಿ ಮತ್ತು ತ್ರಿಪುರಾದ ಬೊಕ್ಸಾನಗರ ಮತ್ತು ಧನ್‌ಪುರ ಈ ಏಳು ವಿಧಾನಸಭಾ ಸ್ಥಾನಗಳಿಗೆ ಸೆಪ್ಟೆಂಬರ್ 5 ರಂದು ಮತದಾನ ನಡೆದಿತ್ತು. ಈ ಉಪಚುನಾವಣೆಯು ಸದ್ಯ ಇಂಡಿಯಾ ಮೈತ್ರಿಕೂಟ ಮತ್ತು ಎನ್‌ಡಿಎಗಳಿಗೆ ಎಷ್ಟರ ಮಟ್ಟಿಗೆ ಜನಬೆಂಬಲ ಇದೆ ಎಂಬುದಕ್ಕೆ ದಿಕ್ಸೂಚಿ ಎಂದು ಹೇಳಲಾಗುತ್ತಿದೆ. ಈ ಮತದಾನದ ಫಲಿತಾಂಶ ಇಂದು ಪ್ರಕಟವಾಗಲಿದೆ.

ಆಯಾ ರಾಜ್ಯಗಳಲ್ಲಿ ಸ್ಥಾಪಿಸಲಾಗಿರುವ ಕೇಂದ್ರಗಳಲ್ಲಿ ಇಂದು ಬೆಳಗ್ಗೆ 8 ಗಂಟೆಯಿಂದ ಮತ ಎಣಿಕೆ ಆರಂಭಗೊಂಡಿದೆ.

ಉತ್ತರ ಪ್ರದೇಶದ ಘೋಸಿ ವಿಧಾನಸಭಾ ಕ್ಷೇತ್ರದಲ್ಲಿ ಮಂಗಳವಾರ ನಡೆದ ಉಪಚುನಾವಣೆಗೆ ಕೇವಲ ಶೇ.49.42ರಷ್ಟು ಮತದಾರರು ಮಾತ್ರ ಮತ ಚಲಾಯಿಸಿದ್ದಾರೆ. ಜಾರ್ಖಂಡ್‌ನ ದುಮ್ರಿಯಲ್ಲಿ 64.84 ರಷ್ಟು ಮತದಾನವಾಗಿದ್ದರೆ, ಉತ್ತರಾಖಂಡದ ಬಾಗೇಶ್ವರ್‌ನಲ್ಲಿ 55.35 ರಷ್ಟು ಮತದಾನವಾಗಿದೆ.
ತ್ರಿಪುರಾದ ಬೊಕ್ಸಾನಗರ ಮತ್ತು ಧನ್‌ಪುರದಲ್ಲಿ ಕ್ರಮವಾಗಿ 86.34 ಮತ್ತು 81.88 ರಷ್ಟು ಮತದಾನವಾಗಿದ್ದರೆ, ಬಂಗಾಳದ ಧುಪ್‌ಗುರಿಯಲ್ಲಿ ಶೇಕಡಾ 74.35 ರಷ್ಟು ಮತದಾನವಾಗಿದೆ.

ಒಟ್ಟು 24 ಸುತ್ತಿನ ಮತ ಎಣಿಕೆ ನಡೆಯಲಿದ್ದು, 70ಕ್ಕೂ ಹೆಚ್ಚು ಅಧಿಕಾರಿಗಳನ್ನು ನಿಯೋಜಿಸಲಾಗಿದೆ.  ಹಾಗೆಯೇ ಸೂಕ್ತ ಭದ್ರತೆಗಾಗಿ ಮತ್ತು ನ್ಯಾಯಯುತ ಎಣಿಕೆ ಖಚಿತಪಡಿಸಿಕೊಳ್ಳಲು ಕೇಂದ್ರ ಸಶಸ್ತ್ರ ಪೊಲೀಸ್ ಪಡೆ ಮತ್ತು ಜಾರ್ಖಂಡ್ ಪೊಲೀಸರ ವಿವಿಧ ವಿಭಾಗಗಳನ್ನು ನಿಯೋಜಿಸಲಾಗಿದೆ ಎಂದು ಗಿರಿದಿಹ್ ಉಪ ಆಯುಕ್ತ ಮತ್ತು ಚುನಾವಣಾ ಅಧಿಕಾರಿ ನಮನ್ ಪ್ರೀಶ್ ಲಾಕ್ರಾ ತಿಳಿಸಿದ್ದಾರೆ.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!