ಹೊಸದಿಗಂತ ಡಿಜಿಟಲ್ ಡೆಸ್ಕ್:
ಇಲ್ಲಿಯವರೆಗೆ ಕ್ಯಾಶ್ ಬೇಕೆಂದರೆ ಎಟಿಎಂಗೆ ಕಾರ್ಡ್ ಹಿಡಿದು ಹೋಗಲೇಬೇಕಿತ್ತು. ಎಷ್ಟೋ ಮಂದಿ ಎಲ್ಲೆಡೆ ಯುಪಿಐ ಮಾತ್ರ ಬಳಕೆ ಮಾಡುವ ಅಭ್ಯಾಸ ಇಟ್ಟುಕೊಂಡಿದ್ದು, ಕಾರ್ಡ್ ಎಲ್ಲಿ ಇಟ್ಟಿದ್ದಾರೆ ಅನ್ನೋದನ್ನು ಮರೆತುಹೋಗಿದ್ದಾರೆ.
ಆದರೆ ಕ್ಯಾಶ್ ಬಿಡಿಸಲು ಇನ್ಮುಂದೆ ಕಾರ್ಡ್ ಬೇಕಾಗಿಲ್ಲ, ಹೌದು, ಎಟಿಎಂನಲ್ಲಿ ಯುಪಿಐ ಬಳಸಿಯೂ ಹಣವನ್ನು ಡ್ರಾ ಮಾಡಿಕೊಳ್ಳಬಹುದು. ಈ ಬಗ್ಗೆ ಕೇಂದ್ರ ಸಚಿವ ಪಿಯೂಷ್ ಗೋಯಲ್ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ.
ಫಿನ್‌ಟೆಕ್‌ನ ಪ್ರಭಾವಿ ರವಿಸುತಂಜನಿ ಅವರು ಯುಪಿಐ ಬಳಸಿ ಎಟಿಎಂನಿಂದ ಹಣ ಪಡೆಯುವ ವಿಡಿಯೋ ಇದಾಗಿದೆ. ಯುಪಿಐ ಕಾರ್ಡ್‌ಲೆಸ್ ಕ್ಯಾಶ್ ಆಯ್ಕೆಯ ಮೇಲೆ ಕ್ಲಿಕ್ ಮಾಡಬೇಕು. ನಂತರ ಎಷ್ಟು ಹಣ ಬೇಕು ಎನ್ನುವುದನ್ನು ನಮೂದಿಸಬೇಕು. ನಂತರ ಕ್ಯೂ ಆರ್ ಕೋಡ್ ಕಾಣಿಸುತ್ತದೆ. ತಮ್ಮ ಮೊಬೈಲ್‌ನಲ್ಲಿ ಇರುವ ಭೀಮ್ ಆಪ್ ಬಳಸಿ ಕ್ಯೂ ಆರ್ ಕೋಡ್ ಸ್ಕ್ಯಾನ್ ಮಾಡಿ ನಂತರ ಯುಪಿಐ ಪಿನ್ ನಮೂದಿಸಿದರೆ ಹಣ ಬರುತ್ತದೆ.
UPI ATM: The future of fintech is here! 💪🇮🇳 pic.twitter.com/el9ioH3PNP
— Piyush Goyal (@PiyushGoyal) September 7, 2023
ಯುಪಿಐ ಎಟಿಎಂ ಕೂಡ ಮಾಮುಲಿ ಎಟಿಎಂ ರೀತಿಯೇ ಕಾರ್ಯನಿರ್ವಹಿಸುತ್ತದೆ. ಅನುಮತಿಸಲಾದ ಉಚಿತ ಬಳಕೆಯ ಮಿತಿ ಮೀರಿ ಹಣ ಪಡೆದರೆ ಶುಲ್ಕ ಅನ್ವಯಿಸುತ್ತದೆ. ಸದ್ಯಕ್ಕೆ ಭೀಮ್ ಯುಪಿಐ ಆಪ್‌ನಲ್ಲಿ ಮಾತ್ರ ಈ ಫೆಸಿಲಿಟಿ ಲಭ್ಯವಿದೆ. ಕೆಲವೇ ದಿನಗಳಲ್ಲಿ ಫೋನ್ ಪೇ, ಗೂಗಲ್ ಪೇ, ಪೇಟಿಎಂನಲ್ಲಿಯೂ ಈ ಸೇವೆ ಸಿಗಲಿದೆ.